Select Your Language

Notifications

webdunia
webdunia
webdunia
webdunia

ಇನ್ಮುಂದೆ ಆನ್‍ಲೈನ್‍ನಲ್ಲಿ ಕಾಣಿಕೆ ?

ಇನ್ಮುಂದೆ ಆನ್‍ಲೈನ್‍ನಲ್ಲಿ ಕಾಣಿಕೆ ?
ಬೆಂಗಳೂರು , ಗುರುವಾರ, 24 ಫೆಬ್ರವರಿ 2022 (13:19 IST)
ಬೆಂಗಳೂರು : ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಸಮಗ್ರ ದೇವಾಲಯ ನಿರ್ವಹಣಾ ವ್ಯವಸ್ಥೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಲೋಕಾರ್ಪಣೆಗೊಳಿಸಲಿದ್ದಾರೆ.
 
ಐಟಿಎಂಎಸ್ ಯೋಜನೆಯಿಂದ ಒಂದೇ ವೆಬ್ಸೈಟ್ನಲ್ಲಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಾಲಯಗಳ ಸಮಗ್ರ ಮಾಹಿತಿಗಳು ಜನರ ಬೆರಳ ತುದಿಯಲ್ಲೇ ಲಭ್ಯವಿರಲಿವೆ. ಅಲ್ಲದೇ ದೇವಾಲಯಗಳಲ್ಲಿ ಲಭ್ಯವಿರುವ ಸೇವೆಗಳನ್ನು ಆನ್ಲೈನ್ ಮೂಲಕ ಬುಕ್ಕಿಂಗ್ ಮಾಡುವ ವ್ಯವಸ್ಥೆ ಇರಲಿದೆ.

ದೇವಾಲಯಗಳಲ್ಲಿ ನಡೆಯುವ ಉತ್ಸವ, ಜಾತ್ರೆಗಳು, ಹಬ್ಬ ಹರಿದಿನಗಳ ವಿವರಗಳನ್ನು ಸಾರ್ವಜನಿಕರಿಗೆ/ಭಕ್ತಾಧಿಗಳಿಗೆ ಪಡೆಯಲು ಅನುಕೂಲವಾಗುವಂತೆ ಐಟಿಎಂಎಸ್ ತಂತ್ರಾಂಶದಲ್ಲಿ ಸದರಿ ಮಾಹಿತಿಗಳನ್ನು ಅಪ್ ಲೋಡ್ ಮಾಡುವ ವ್ಯವಸ್ಥೆಯಿದೆ. ದೇವಾಲಯಗಳ ಆಸ್ತಿಗಳ ವಿವರ ಮತ್ತು ಅವುಗಳ ವಹಿವಾಟಿನ ಮಾಹಿತಿಗಳೂ ಇರಲಿವೆ.

ಜಗತ್ತಿನ ಯಾವುದೇ ಭಾಗದಿಂದ ಆನ್ಲೈನ್ ಮೂಲಕ ಕಾಣಿಕೆಯನ್ನು ಸಲ್ಲಿಸಬಹುದಾಗಿದೆ. ಸರ್ಕಾರದ ಭೂ ದಾಖಲೆಗಳ ದತ್ತಾಂಶದೊಂದಿಗೆ ಸಂಯೋಜನೆ ಮಾಡಬಹುದಾದ ತಾಂತ್ರಿಕತೆಯನ್ನು ಅಳವಡಿಸಲಾಗಿದೆ. ವಿವಿಧ ರೀತಿಯ ಒIS ವರದಿಗಳನ್ನು ಪಡೆಯಲು ಅವಕಾಶವಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೃದ್ಧ ಮಹಿಳೆಗೆ ಕಿರುಕುಳ: ಆಸ್ಪತ್ರೆಗೆ ಸಿಬ್ಬಂದಿ ಅರೆಸ್ಟ್