Select Your Language

Notifications

webdunia
webdunia
webdunia
webdunia

ಲಕ್ಷ ದೀಪೋತ್ಸವ ರದ್ದು!

ಲಕ್ಷ ದೀಪೋತ್ಸವ ರದ್ದು!
ಮಂಡ್ಯ , ಶನಿವಾರ, 15 ಜನವರಿ 2022 (17:43 IST)
ಮಂಡ್ಯ : ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಶ್ರೀರಂಗನಾಥ ದೇವಾಲಯದ ಲಕ್ಷ ದೀಪೋತ್ಸವವನ್ನು ರದ್ದು ಮಾಡಲಾಗಿದೆ.

ಕಳೆದ 24 ವರ್ಷಗಳಿಂದ ಲಕ್ಷ ದೀಪೋತ್ಸವವನ್ನು ಆಚರಿಸಲಾಗುತ್ತಿತ್ತು. ಮಕರ ಸಂಕ್ರಾಂತಿಯಂದು ರಾತ್ರಿ ಭಾರೀ ವಿಜೃಂಭಣೆಯಿಂದ ನಡೆಯುತ್ತಿದ್ದ ಲಕ್ಷ ದೀಪೋತ್ಸವ ಇದೇ ಮೊದಲ ಬಾರಿಗೆ ರದ್ದಾಗಿದೆ ಎನ್ನಲಾಗುತ್ತಿದೆ. ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಶ್ರೀರಂಗನಾಥ ದೇವಾಲಯವನ್ನು ಮುಚ್ಚಲಾಗಿದ್ದು, ಭಕ್ತರು ಹೊರಾಂಗಣದಲ್ಲೇ ಕೈ ಮುಗಿದು ತೆರಳುತ್ತಿದ್ದಾರೆ.

ದೇವಾಲಯದ ಆಡಳಿತ ಮಂಡಳಿ ಲಕ್ಷ ದೀಪೋತ್ಸವದ ಬದಲು ಲಘು ದೀಪೋತ್ಸವ ಆಚರಿಸಲು ನಿರ್ಧರಿಸಿದೆ. ಹೀಗಾಗಿ ದೇವಾಲಯದ ಪ್ರಾಂಗಣದಲ್ಲಿ ಲಘು ದೀಪೋತ್ಸವ ನಡೆಯಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಅಷ್ಟೆ ಅವಕಾಶ!