Publish Date: Tue, 11 Jan 2022 (17:30 IST)
Updated Date: Tue, 11 Jan 2022 (21:31 IST)
ಬೆಂಗಳೂರು : ರಾಜ್ಯದಲ್ಲಿ ಹತ್ತು ಹಲವು ಕಾರಣಗಳಿಂದ ಕೋವಿಡ್ ಸ್ಫೋಟ ಮುಂದುವರಿದಿದೆ. ಕಳೆದ 13 ದಿನಗಳಿಂದ ನಿರಂತರವಾಗಿ ಸೋಂಕು ಪ್ರಮಾಣ ಏರಿಕೆ ಆಗುತ್ತಿದೆ.
ಒಂದಿಷ್ಟು ಟಫ್ ರೂಲ್ಸ್ ಜಾರಿ ಮಾಡಿದ್ದರೂ, ಕೋವಿಡ್ ಸಮುದಾಯಕ್ಕೆ ಹಬ್ಬಿರುವ ಕಾರಣ ಸೋಂಕು ಸ್ಫೋಟ ಇಲ್ಲಿಗೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ನಿತ್ಯದ ಕೇಸ್ ಕನಿಷ್ಟ 1.5 ಲಕ್ಷಕ್ಕೆ ಏರಿಕೆಯಾಗುವ ಸಂಭವ ಇದೆ.
ಹೀಗಾಗಿ ರಾಜ್ಯದಲ್ಲಿ ಜನವರಿ ಅಂತ್ಯದವರೆಗೂ ರಾಜ್ಯದಲ್ಲಿ ಈಗಿರುವ ನಿಯಮಗಳನ್ನೇ ಮುಂದುವರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಖುದ್ದು ಮುಖ್ಯಮಂತ್ರಿಗಳು ಕೊರೋನಾ ಸೋಂಕಿತರಾಗಿದ್ದರೂ, ಸೋಂಕು ತಡೆ ನಿಟ್ಟಿನಲ್ಲಿ ತುರ್ತು ವರ್ಚೂವಲ್ ಸಭೆ ನಡೆಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.