Publish Date: Sat, 15 Jan 2022 (16:37 IST)
Updated Date: Sat, 15 Jan 2022 (21:39 IST)
ಬೆಂಗಳೂರು : ತುರ್ತು ಚಿಕಿತ್ಸೆ ಅಗತ್ಯವಿರುವವರು ಹೊರತುಪಡಿಸಿ ಇತರೆ ರೋಗಿಗಳು ಆಸ್ಪತ್ರೆಗಳಿಗೆ ಭೇಟಿ ನೀಡದಂತೆ ಸರ್ಕಾರ ಸೂಚನೆ ನೀಡಿದೆ.
ಹೊರರೋಗಿಗಳು, ತಪಾಸಣೆಗಾಗಿ ಆಸ್ಪತ್ರೆಗೆ ಹೋಗುವವರು, ದಂತ ಚಿಕಿತ್ಸೆ ಪಡೆಯುವವರು ಸೇರಿದಂತೆ ಇನ್ನಿತರ ರೋಗಿಗಳು ಎರಡು ವಾರಗಳ ಕಾಲ ಆಸ್ಪತ್ರೆಗಳಿಗೆ ಭೇಟಿ ನೀಡದಂತೆ ಸರ್ಕಾರ ತಿಳಿಸಿದೆ.
ಆಸ್ಪತ್ರೆಗಳಲ್ಲಿ ಜನಸಂದಣಿ ನಿಯಂತ್ರಿಸುವ ಸಲುವಾಗಿ ಈ ಆದೇಶ ಹೊರಡಿಸಲಾಗಿದೆ. ಕೋವಿಡ್ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಎಚ್ಚರಿಕೆಯ ಸೂಚನೆ ರವಾನೆಯಾಗಿದೆ.