Select Your Language

Notifications

webdunia
webdunia
webdunia
Friday, 11 April 2025
webdunia

ದೇವರ ಆಭರಣ ಕಳ್ಳಲು ಬಂದವ ಸೈಲಂಟಾಗಿ ಹೋಗಿದ್ದೇಕೆ?!

ದೇವಾಲಯ
ಬೆಂಗಳೂರು , ಶನಿವಾರ, 5 ಫೆಬ್ರವರಿ 2022 (11:10 IST)
ಬೆಂಗಳೂರು: ಕಳ್ಳರಾದರೇನು? ಕೆಲವರಲ್ಲಿ ದೈವ ಭಕ್ತಿಯೂ ಇರುತ್ತದೆ. ಇದೇ ರೀತಿ ನಗರದಲ್ಲಿ ಕಳ್ಳನೊಬ್ಬ ದೇವರ ಆಭರಣ ಕಳ್ಳಲು ಬಂದವನು ಸೈಲಂಟಾಗಿ ಜಾಗ ಖಾಲಿ ಮಾಡಿದ ಘಟನೆ ನಡೆದಿದೆ.

ಕಳ್ಳನೊಬ್ಬ ತುಂಡು ಬಟ್ಟೆಯಲ್ಲಿ ತಾವರೆಕೆರೆಯ  ಸುಬ್ರಮಣ್ಯ ದೇವಾಲಯದಲ್ಲಿ ಕಳ್ಳತನಕ್ಕೆ ಬಂದಿದ್ದ. ಬೀಗ ಒಡೆದು ಗರ್ಭಗುಡಿ ಪ್ರವೇಸಿಸಿದ ಕಳ್ಳ ಕೆಲವು ಕಾಲ ವಿಗ್ರಹದ ಮುಂದೆ ನಿಂತಿದ್ದಾನೆ.

ಬಳಿಕ ಆಭರಣ ಕಳ್ಳತನ ಮಾಡದೇ ಸೈಲಂಟಾಗಿ ಜಾಗ ಖಾಲಿ ಮಾಡಿದ್ದಾನೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ. ಕಳ್ಳತನ ಮಾಡಲು ಬಂದವನು ಹಾಗೇ ಹೋಗಲು ಕಾರಣವಾಗಿದ್ದಾದರೂ ಏನು ಎಂಬುದು ಈಗ ಅಚ್ಚರಿಯಾಗಿ ಉಳಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯುವತಿಗೆ ಮೆಸೇಜ್ ಮಾಡ್ತಿದ್ದ ಎಂದು ಕೊಲೆಗೆ ಸ್ಕೆಚ್