Select Your Language

Notifications

webdunia
webdunia
webdunia
webdunia

ಗೆಳತಿ ಜೊತೆ ಹೋಟೆಲ್ ರೂಂ ಪಡೆಯಲು ಪತ್ನಿಯ ಆಧಾರ್ ಕಾರ್ಡ್ ನೀಡಿ ಸಿಕ್ಕಿಬಿದ್ದ!

ಗೆಳತಿ ಜೊತೆ ಹೋಟೆಲ್ ರೂಂ ಪಡೆಯಲು ಪತ್ನಿಯ ಆಧಾರ್ ಕಾರ್ಡ್ ನೀಡಿ ಸಿಕ್ಕಿಬಿದ್ದ!
ಪುಣೆ , ಶನಿವಾರ, 5 ಫೆಬ್ರವರಿ 2022 (09:40 IST)
ಪುಣೆ: ಗೆಳತಿ ಜೊತೆ ಹೋಟೆಲ್ ನಲ್ಲಿ ರೂಂ ಪಡೆಯಲು ಪತ್ನಿಯ ಆಧಾರ್ ಕಾರ್ಡ್ ಬಳಸುತ್ತಿದ್ದ ಉದ್ಯಮಿಯೊಬ್ಬ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಪುಣೆ ಮೂಲದ 41 ವರ್ಷದ ಉದ್ಯಮಿ ಬಂಧಿತ. ಆತನ ಪತ್ನಿಯೂ ಆತನ ಕಂಪನಿಯ ನಿರ್ದೇಶಕಿಯಾಗಿದ್ದಳು. ತನ್ನ ಪತಿ ಮೇಲೆ ಸಂಶಯ ಹೊಂದಿದ್ದ ಪತ್ನಿ ಆತನ ಕಾರಿಗೆ ಜಿಪಿಎಸ್ ಅಳವಡಿಸಿದ್ದಳು. ಇದರಿಂದಾಗಿ ಪತಿ ಎಲ್ಲೇ ಹೋಗುತ್ತಿದ್ದರೂ ಆಕೆಗೆ ಗೊತ್ತಾಗುತ್ತಿತ್ತು.

ಇದರಿಂದಾಗಿ ಪತಿ ಮಾಡುತ್ತಿದ್ದ ವಂಚನೆ ಆಕೆಗೆ ಗೊತ್ತಾಗಿತ್ತು. ಅದರಂತೆ ಆಕೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೂ. ಎನ್ ಟಿಆರ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಅಲಿಯಾ ಬಟ್