Select Your Language

Notifications

webdunia
webdunia
webdunia
webdunia

ಮಾನಸಿಕ ಅಸ್ವಸ್ಥೆಯ ಶೀಲ ಕೆಡಿಸಿ ಕೊಲೆ ಮಾಡಿದ ಚಿಂದಿ ಆಯುವ ವ್ಯಕ್ತಿ

ಮಾನಸಿಕ ಅಸ್ವಸ್ಥೆಯ ಶೀಲ ಕೆಡಿಸಿ ಕೊಲೆ ಮಾಡಿದ ಚಿಂದಿ ಆಯುವ ವ್ಯಕ್ತಿ
ಚೆನ್ನೈ , ಶುಕ್ರವಾರ, 4 ಫೆಬ್ರವರಿ 2022 (09:30 IST)
ಚೆನ್ನೈ: ಮಾನಸಿಕ ಅಸ್ವಸ್ಥೆಯೊಬ್ಬಳ ಮೇಲೆ ಅತ್ಯಾಚಾರ ನಡೆಸಿದ ಚಿಂದಿ ಆಯುವ ಯುವಕನೊಬ್ಬ ಆಕೆಯನ್ನು ಕೊಲೆ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಈ ಸಂಬಂಧ ಪೊಲೀಸರು 32 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ. ಮಹಿಳೆಯ ಮೃತದೇಹ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

ರಸ್ತೆಯಲ್ಲಿ ಓಡಾಡುತ್ತಿದ್ದ ಮಹಿಳೆಯನ್ನು ಕಾಮಗಾರಿ ನಡೆಯುತ್ತಿದ್ದ ಕಟ್ಟಡವೊಂದಕ್ಕೆ ಎಳೆದೊಯ್ದ ಆರೋಪಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ. ಮಹಿಳೆ ಕೂಗಿಕೊಂಡರೂ ಯಾರಿಗೂ ಕೇಳಿಸಿರಲಿಲ್ಲವೆನ್ನಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಧ್ಯರಾತ್ರಿ ಅಗ್ನಿ ದುರಂತ!