Publish Date: Sat, 05 Feb 2022 (09:30 IST)
Updated Date: Sat, 05 Feb 2022 (09:44 IST)
ಬೆಂಗಳೂರು: ಇತ್ತೀಚೆಗೆ ಕೇರಳದಲ್ಲಿ ಲೈಂಗಿಕ ಸುಖಕ್ಕಾಗಿ ಪತ್ನಿಯರ ವಿನಿಮಯ ಮಾಡುತ್ತಿದ್ದ ಜಾಲ ಬೆಳಕಿಗೆ ಬಂದಿತ್ತು. ಇದೀಗ ನಮ್ಮ ಬೆಂಗಳೂರಿನಲ್ಲೇ ಅಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಪತಿಗೆ ತನ್ನ ಪತ್ನಿ ಇನ್ನೊಬ್ಬರ ಜೊತೆ ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡುವ ಕೆಟ್ಟ ಬಯಕೆ. ಇದಕ್ಕಾಗಿ ವೈಫ್ ಸ್ವಾಪಿಂಗ್ ಜಾಲತಾಣಗಳ ಮೂಲಕ ಸಮಾನ ಮನಸ್ಕರಿಗಾಗಿ ಹುಡುಕಾಟ ನಡೆಸುತ್ತಿದ್ದ. ವಿಶೇಷವೆಂದರೆ ಇದಕ್ಕೆ ಪತ್ನಿಯ ಸಹಕಾರವೂ ಇತ್ತು!
ಬೆಂಗಳೂರು ಪೊಲೀಸರಿಗೆ ಸಾಮಾಜಿಕ ಜಾಲತಾಣದಲ್ಲಿ ಇಂತಹ ದಂಧೆ ನಡೆಯುತ್ತಿರುವುದು ತಿಳಿದು ಬಂದಿತ್ತು. ಇದರಿಂದ ಸ್ವಯಂ ಪ್ರೇರಿತವಾಗಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.