Select Your Language

Notifications

webdunia
webdunia
webdunia
webdunia

ಆಸ್ತಿ ಕೊಡದ ಪತಿಯನ್ನು ಪುತ್ರನ ಜೊತೆ ಸೇರಿ ಕೊಂದ ಪತ್ನಿ

ಕೊಲೆ
ಬೆಂಗಳೂರು: ಕೇವಲ 12 ಗುಂಟೆ ಜಮೀನಿಗಾಗಿ ಮಗನ ಜೊತೆ ಸೇರಿಕೊಂಡು ಪತ್ನಿಯೇ ಪತಿಯನ್ನು ಕೊಂದ ಘಟನೆ ನಡೆದಿದೆ.

12 ಗುಂಟೆ ಜಮೀನನ್ನು ಪುತ್ರನ ಹೆಸರಿಗೆ ಬರೆದುಕೊಡಲು ಪತಿ ನಿರಾಕರಿಸಿದ್ದಕ್ಕೆ ಪತ್ನಿ ಪುತ್ರನ ಜೊತೆ ಸೇರಿಕೊಂಡು ಸಹಾಯಕರಿಂದ ಕೊಲೆ ಮಾಡಿಸಿದ್ದಾರೆ. ಈ ಸಂಬಂಧ ಪತ್ನಿ, ಪುತ್ರ ಹಾಗೂ ಇತರರನ್ನು ಪೊಲೀಸರು ಬಂಧಿಸಿದ್ದಾರೆ.

ಪತ್ನಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರೆ, ಪುತ್ರನೂ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ. ಪತಿ ಈಗಾಗಲೇ ಮಹಿಳೆಯಿಂದ ದೂರವಾಗಿದ್ದು ಇನ್ನೊಂದು ಮದುವೆಯಾಗಿದ್ದ. ಆತನಿಗೆ ಸೇರಿದ್ದ 21 ಗುಂಟೆ ಜಮೀನು ಮಾರಾಟ ಮಾಡಲು ಹೊರಟಿದ್ದ. ಈ ವೇಳೆ ತನ್ನ ಮಗನ ಹೆಸರಿಗೆ ಆಸ್ತಿ ಬರೆಯುವಂತೆ ಪತ್ನಿ ಕೇಳಿದ್ದಳು. ಅದಕ್ಕೆ ಆತ ಒಪ್ಪದೇ ಇದ್ದಾಗ ಕೊಲೆ ಮಾಡಿದ್ದಾಳೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮೂರನೇ ಅಲೆ : ಹೆಚ್ಚು ಭಾದಿಸುತ್ತಿರುವುದು ಇಳಿ ವಯಸ್ಸಿನವರು!