Select Your Language

Notifications

webdunia
webdunia
webdunia
webdunia

ಮೂರನೇ ಅಲೆ : ಹೆಚ್ಚು ಭಾದಿಸುತ್ತಿರುವುದು ಇಳಿ ವಯಸ್ಸಿನವರು!

ಮೂರನೇ ಅಲೆ : ಹೆಚ್ಚು ಭಾದಿಸುತ್ತಿರುವುದು ಇಳಿ ವಯಸ್ಸಿನವರು!
ನವದೆಹಲಿ , ಶುಕ್ರವಾರ, 4 ಫೆಬ್ರವರಿ 2022 (09:36 IST)
ಒಮಿಕ್ರಾನ್ ಸೋಂಕಿನಿಂದ ಉಂಟಾಗಿರುವ ಕೊವಿಡ್ 19 ಮೂರನೇ ಅಲೆ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುಜನರು ಅಂದರೆ ಕಿರಿಯವಯಸ್ಸಿನವರಿಗೇ ಬಾಧಿಸುತ್ತಿದೆ.
 
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು , ಆಸ್ಪತ್ರೆಗಳ ಅಂಕಿ-ಅಂಶಗಳನ್ನು ಆಧರಿಸಿ ನಡೆಸಿದ್ದ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.

ದೇಶಾದ್ಯಂತ ಸುಮಾರು 37 ಆಸ್ಪತ್ರೆಗಳಿಂದ ಸಂಗ್ರಹಿಸಿದ್ದ ಅಂಕಿ-ಅಂಶಗಳನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿತ್ತು ಎಂದು ಐಸಿಎಂಆರ್ ಮಹಾನಿರ್ದೇಶಕ ಡಾ.ಬಲರಾಮ್ ಭಾರ್ಗವ್ ತಿಳಿಸಿದ್ದಾರೆ.

ಆಸ್ಪತ್ರೆಗಳಲ್ಲಿ ಲಭ್ಯವಾದ 2021  ಡಿಸೆಂಬರ್ 16 ಮತ್ತು 2022 ಜನವರಿ 17 ರ ನಡುವಿನ ಡೇಟಾವನ್ನು 2021ರ ನವೆಂಬರ್ 15 ಮತ್ತು ಡಿಸೆಂಬರ್ 15ರ ಡೇಟಾಕ್ಕೆ ಹೋಲಿಸಿ ಸಮೀಕ್ಷೆ ನಡೆಸಿದಾಗ, ಈ ಬಾರಿ ಮೂರನೇ ಅಲೆಯಲ್ಲಿ ಆಸ್ಪತ್ರೆಗೆ ಮೂರನೇ ತರಂಗದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸರಾಸರಿ ವಯಸ್ಸು ಅಂದಾಜು 44 ಆಗಿತ್ತು. ಅದು ಹಿಂದಿನ ಅಲೆಯಲ್ಲಿ ಅಂದಾಜು 55 ಆಗಿತ್ತು ಎಂದು ಹೇಳಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಾನಸಿಕ ಅಸ್ವಸ್ಥೆಯ ಶೀಲ ಕೆಡಿಸಿ ಕೊಲೆ ಮಾಡಿದ ಚಿಂದಿ ಆಯುವ ವ್ಯಕ್ತಿ