Select Your Language

Notifications

webdunia
webdunia
webdunia
webdunia

ಚರ್ಮದ ಮೇಲೆ 21 ಗಂಟೆ, ಪ್ಲಾಸ್ಟಿಕ್ ಮೇಲೆ 8 ದಿನ ಬದುಕಬಲ್ಲದು ಒಮಿಕ್ರಾನ್

ಚರ್ಮದ ಮೇಲೆ 21 ಗಂಟೆ, ಪ್ಲಾಸ್ಟಿಕ್ ಮೇಲೆ 8 ದಿನ ಬದುಕಬಲ್ಲದು ಒಮಿಕ್ರಾನ್
bangalore , ಗುರುವಾರ, 27 ಜನವರಿ 2022 (21:18 IST)
ಕೊರೋನಾ ವೈರಸ್‌ನ ರೂಪಾಂತರ ತಳಿ ಒಮಿಕ್ರಾನ್ ವಿಶ್ವದೆಲ್ಲೆಡೆ ಹರಡಿದ್ದು, ಇದು 21 ಗಂಟೆಗಳ ಕಾಲ ಚರ್ಮದ ಮೇಲೆ ಹಾಗೂ ಎಂಟು ದಿನಗಳಿಗೂ ಹೆಚ್ಚು ಕಾಲ ಪ್ಲಾಸ್ಟಿಕ್ ಮೇಲೆ ಜೀವಂತವಾಗಿರಬಹುದು ಎಂದು ಅಧ್ಯಯನವೊಂದು ತಿಳಿಸಿದೆ.
ಇತರ ತಳಿಗಳಿಗೆ ಹೋಲಿಸಿದರೆ ಇದರ ಜೀವಿತಾವಧಿಯೂ ಹೆಚ್ಚು ಹಾಗೂ ವೇಗವಾಗಿ ಹರಡುವ ಸಾಮರ್ಥ್ಯವನ್ನೂ ಹೊಂದಿದೆ ಎಂದು ಜಪಾನ್‌ನ ಕ್ಯೋಟೊ ಪ್ರಿಫೆಕ್ಚರಲ್ ಯೂನಿವರ್ಸಿಟಿ ಆಫ್ ಮೆಡಿಸಿನ್‌ನ ಸಂಶೋಧಕರು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
ವುಹಾನ್‌ನಲ್ಲಿ ಪತ್ತೆಯಾದ ವೈರಸ್‌ಗಿಂತ, ಆಲ್ಫಾ, ಬೀಟಾ, ಡೆಲ್ಟಾ ಮತ್ತು ಒಮಿಕ್ರಾನ್ ರೂಪಾಂತರ ತಳಿಗಳು ಪ್ಲಾಸ್ಟಿಕ್ ಹಾಗೂ ಚರ್ಮದ ಮೇಲೆ ಹೆಚ್ಚು ಕಾಲ ಬದುಕಬಲ್ಲವು ಎಂದು ಅಧ್ಯಯನ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ದಿನದಲ್ಲಿ 2,86,384 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ ; ಸಾವಿನ ಸಂಖ್ಯೆಯಲ್ಲೂ ಏರಿಕೆ