ದರ್ಶನ್ ವಿರುದ್ಧ ಹಳೇ ಕೇಸ್ ರಿ ಓಪನ್

Krishnaveni K
ಶುಕ್ರವಾರ, 18 ಅಕ್ಟೋಬರ್ 2024 (11:27 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಗೆ ಮತ್ತೊಂದು ಪ್ರಕರಣ ಸುತ್ತಿಕೊಂಡಿದೆ. ಹಳೇ ಕೇಸ್ ಒಂದು ರಿ ಓಪನ್ ಆಗಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 120 ಕ್ಕೂ ಹೆಚ್ಚು ದಿನಗಳಿಂದ ದರ್ಶನ್ ಜೈಲಿನಲ್ಲೇ ಇದ್ದಾರೆ. ಅವರ ಜಾಮೀನು ಅರ್ಜಿ ಇತ್ತೀಚೆಗೆ ಕೆಳಹಂತದ ನ್ಯಾಯಾಲಯದಲ್ಲಿ ತಿರಸ್ಕೃತವಾಗಿತ್ತು. ಈ ಹಿನ್ನಲೆಯಲ್ಲಿ ಅವರು ಹೈಕೋರ್ಟ್ ಮೊರೆ ಹೋಗುತ್ತಿದ್ದಾರೆ. ಆದರೆ ಈ ನಡುವೆ ಅವರಿಗೆ ಹಳೇ  ಕೇಸ್ ಕಂಟಕ ತಂದಿದೆ.

ಭಗವಾನ್ ಶ್ರೀಕೃಷ್ಣಾ ಎಂಬ ಸಿನಿಮಾವನ್ನು ಯುವ ನಿರ್ಮಾಪಕ ಭರತ್ ಎಂಬವರು ನಿರ್ಮಿಸಿದ್ದರು. ಈ ಸಿನಿಮಾಗೆ ಧ್ರುವನ್ ನಾಯಕರಾಗಿದ್ದರು. ಈ ಸಿನಿಮಾ ಶೂಟಿಂಗ್ ನಡೆಯುತ್ತಿಲ್ಲ ಎಂದು ಧ್ರುವನ್ ನಟ ದರ್ಶನ್ ಬಳಿ ದೂರು ಹೇಳಿದ್ದರು. ಅದರಂತೆ ದರ್ಶನ್ ಕೈಯಲ್ಲಿ ಭರತ್ ಗೆ ಧ್ರುವನ್ ಕರೆ ಮಾಡಿಸಿದ್ದರು.

ಧ್ರುವನ್ ಪರವಾಗಿ ಮಾತನಾಡಿದ್ದ ದರ್ಶನ್ ಬೆದರಿಕೆ ಹಾಕಿದ್ದರು. ಘಟನೆ ಬಗ್ಗೆ ಭರತ್ ಇತ್ತೀಚೆಗೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಬಂಧಿತರಾದ ಬಳಿಕ ಮಾಧ್ಯಮಗಳ ಬಳಿ ಹೇಳಿಕೊಂಡಿದ್ದರು. ಈ ಬಗ್ಗೆ ಅವರು ಪೊಲೀಸರಿಗೂ ದೂರು ನೀಡಿದ್ದರು.

ಈ ಹಿಂದೆ ಭರತ್ ದೂರು ಸಲ್ಲಿಸಿದಾಗ ಕೆಂಗೇರಿ ಠಾಣೆ ಪೊಲೀಸರು ಎನ್ ಸಿಆರ್ ದಾಖಲಿಸಿದ್ದರು ಅಷ್ಟೇ. ಇದೀಗ ದರ್ಶನ್, ಅವರ ಮ್ಯಾನೇಜರ್ ನಾಗರಾಜ್, ಧ್ರುವನ್ ವಿರುದ್ಧ ಹೊಸದಾಗಿ ಎನ್ ಸಿಆರ್ ದಾಖಲಿಸಿದ್ದು ತನಿಖೆಗೆ ಮುಂದಾಗಿದ್ದಾರೆ. ಹೀಗಾಗಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್ ಗೆ ಮತ್ತೊಂದು ಕಂಟಕ ಎದುರಾಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರೊಹಿಂಗ್ಯಾಗಳ ಬಗ್ಗೆ ಮಿಡಿಯುವ ಕೆಸಿ ವೇಣುಗೋಪಾಲ್ ಮನಸ್ಸು ಕಾಸರಗೋಡಿನ ಕನ್ನಡಿಗರ ಮೇಲೆ ಯಾಕಿಲ್ಲ: ಆರ್ ಅಶೋಕ್

ಇದ್ದಕ್ಕಿದ್ದಂತೆ ಹುಲಿಯೊಂದು ನಿಮ್ಮ ಎದುರು ಬಂದು ಘರ್ಜಿಸಿದರೆ ಏನಾಗುತ್ತೆ: ಈ ಎದೆ ಝಲ್ಲೆನಿಸುವ ವಿಡಿಯೋ ನೋಡಿ

ಕಾಸರಗೋಡಿನ ಕನ್ನಡ ಶಾಲೆಯಲ್ಲಿ ಮಲಯಾಳಂ ಹೇರಿಕೆಗೆ ಬಿವೈ ವಿಜಯೇಂದ್ರ ಆಕ್ರೋಶ Video

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

ಮುಂದಿನ ಸುದ್ದಿ
Show comments