ಕರ್ನಾಟಕದಲ್ಲಿ ಸರ್ಕಾರೀ ಶಾಲೆಯಲ್ಲಿ ಓದುವ ಮಕ್ಕಳಿಗೆ ಇನ್ನು ಈ ಭಾಗ್ಯ ಗ್ಯಾರಂಟಿ

Krishnaveni K
ಶುಕ್ರವಾರ, 18 ಅಕ್ಟೋಬರ್ 2024 (11:16 IST)
ಬೆಂಗಳೂರು: ಖಾಸಗಿ ಶಾಲೆಯ ಮಕ್ಕಳು ಸಾವಿರಾರು ರೂ. ಫೀಸ್ ಕೊಟ್ಟು ಶಾಲೆಗೆ ಹೋಗುವುದಲ್ಲದೆ, ದುಬಾರಿ ಶುಲ್ಕ ಕೊಟ್ಟು ಮಕ್ಕಳನ್ನು ಟ್ಯೂಷನ್ ಗೂ ಕಳುಹಿಸ್ತಾರೆ. ಆದರೆ ಸರ್ಕಾರೀ ಶಾಲೆಯ ಬಡ ಮಕ್ಕಳಿಗೆ ಈ ಸೌಕರ್ಯವಿಲ್ಲ. ಆದರೆ ಇದಕ್ಕೀಗ ಸರ್ಕಾರವೇ ಪರಿಹಾರ ಕೊಡಿಸಲಿದೆ.

ಇನ್ನು ಮುಂದೆ ಸರ್ಕಾರೀ ಶಾಲೆಯ ಮಕ್ಕಳಿಗೂ ಟ್ಯೂಷನ್ ಒದಗಿಸಲು ಕರ್ನಾಟಕ ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಸರ್ಕಾರೀ ಶಾಲೆಯ ಮಕ್ಕಳಿಗೆ ಗಣಿತ, ವಿಜ್ಞಾನ ಕಬ್ಬಿಣದ ಕಡಲೆಯಾಗುತ್ತಿದೆ. ಹೀಗಾಗಿ ಕೆಲವೊಂದು ಭಾಗಗಳಲ್ಲಿ ಮಕ್ಕಳು ಕಡಿಮೆ ಅಂಕ ಪಡೆಯುತ್ತಿದ್ದಾರೆ. ಇದನ್ನು ತಪ್ಪಿಸಲು ಶಿಕ್ಷಣ ಇಲಾಖೆ ಟ್ಯೂಷನ್ ಕಲ್ಪಿಸಲು ಮುಂದಾಗಿದೆ.

ಪ್ರತಿನಿತ್ಯ ಶಾಲೆ ಆರಂಭಕ್ಕೆ ಮುನ್ನ ಮತ್ತು ನಂತರ ಒಂದು ಗಂಟೆ ಟ್ಯೂಷನ್ ನಡೆಯಲಿದೆ. 1 ನೇ ತರಗತಿಂದ 12 ನೇ ತರಗತಿಯವರೆಗಿನ ಮಕ್ಕಳಿಗೆ ಟ್ಯೂಷನ್ ನೀಡಲಾಗುತ್ತದೆ.  ಯಾವ ತರಗತಿಯಲ್ಲಿ ಯಾವ ಮಕ್ಕಳೆಲ್ಲಾ ಯಾವ ವಿಷಯದಲ್ಲಿ ಹಿನ್ನಡೆಯಲ್ಲಿದ್ದಾರೆ ಎಂದು ಆಯಾ ತರಗತಿಯ ಶಿಕ್ಷಕರೇ ನಿರ್ಧರಿಸಿ ಟ್ಯೂಷನ್ ನೀಡುತ್ತಾರೆ.

ಬಡ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಉಚಿತ ಟ್ಯೂಷನ್ ನೀಡುವ ಮೂಲಕ ಅವರನ್ನು ಮುಂದೆ ತರುವುದು ಇಲಾಖೆಯ ಉದ್ದೇಶವಾಗಿದೆ. ಆದರೆ ಸದ್ಯಕ್ಕೆ ಇದು ಇನ್ನೂ ಜಾರಿಗೆ ಬಂದಿಲ್ಲ. ಕೇವಲ ಘೋಷಣೆಯಾಗದೇ ಇದು ಪರಿಣಾಮಕಾರಿಯಾಗಿ ಜಾರಿಗೆ ಬರಲಿ ಎಂಬುದೇ ಎಲ್ಲರ ಆಶಯ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಈ ಒಂದು ಕಾರಣಕ್ಕೆ ಸಿದ್ದರಾಮಯ್ಯ ಮೇಲೆ ರಾಹುಲ್ ಗಾಂಧಿಗೆ ಹೆಚ್ಚು ಒಲವು

ಪ್ರಿಯಕರನ ಜೊತೆ ಸೇರಿ ಗಂಡನ ಕೊಂದು ಡ್ರಮ್ ನಲ್ಲಿರಿಸಿದ್ದ ಮುಸ್ಕಾನ್ ಕತೆ ಏನಾಗಿದೆ ನೋಡಿ

ಯಡಿಯೂರಪ್ಪ ಅಂದೇ ಡಿಕೆ ಶಿವಕುಮಾರ್ ಭವಿಷ್ಯ ನುಡಿದಿದ್ದರು

ಅಯೋಧ್ಯೆಯಲ್ಲಿ ರಾರಾಜಿಸಲಿದೆ ರಘುವಂಶದ ಕೇಸರಿ ಧ್ವಜ: ಪ್ರಧಾನಿ ಮೋದಿ ಚಾಲನೆ

ರಾಜ್ಯದ ಸಿಎಂ ಕುರ್ಚಿ ಫೈಟ್ ಪರಿಹಾರಕ್ಕೆ ಈ ಒಂದು ಮೀಟಿಂಗ್ ಮೇಲೇ ಎಲ್ಲರ ಕಣ್ಣು

ಮುಂದಿನ ಸುದ್ದಿ
Show comments