Select Your Language

Notifications

webdunia
webdunia
webdunia
webdunia

ಬಿಜೆಪಿಯವರು ಹಿಂದೂಗಳ ಕೇಸ್ ತಗೊಂಡ್ರೆ ಸರಿ, ಕಾಂಗ್ರೆಸ್ ನವರು ಮುಸ್ಲಿಮರ ಕೇಸ್ ವಾಪಸ್ ತಗೊಂಡ್ರೆ ತಪ್ಪಾ

Tanveer Sait

Krishnaveni K

ಬೆಂಗಳೂರು , ಗುರುವಾರ, 17 ಅಕ್ಟೋಬರ್ 2024 (11:50 IST)
Photo Credit: X
ಬೆಂಗಳೂರು: ಹುಬ್ಬಳ್ಳಿಯಲ್ಲಿ ಗಲಭೆ ಕೇಸ್ ವಾಪಸ್ ಪಡೆದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿಪಕ್ಷ ಬಿಜೆಪಿಗೆ ಶಾಸಕ ತನ್ವೀರ್ ಸೇಠ್ ತಿರುಗೇಟು ಕೊಟ್ಟಿದ್ದಾರೆ.

ಬಿಜೆಪಿಯವರು ಈ ಹಿಂದೆ ತಾವು ಅಧಿಕಾರದಲ್ಲಿದ್ದಾಗ ಹಿಂದೂ ಸಂಘಟನೆಗಳ ಮೇಲಿನ ಕೇಸ್ ಗಳನ್ನು ವಾಪಸ್ ಪಡೆದಿಲ್ವಾ? ಈಗ ಕಾಂಗ್ರೆಸ್ ಸರ್ಕಾರ ಅಮಾಯಕ ಮುಸ್ಲಿಮರ ಮೇಲಿನ ಪ್ರಕರಣಗಳನ್ನು ಹಿಂದೆ ಪಡೆದರೆ ಅದು ತಪ್ಪಾ? ಸರ್ಕಾರ ಕೇವಲ ಒಂದು ಸಮುದಾಯದವರಿಗೆ ಮಾತ್ರ ಒಳ್ಳೆಯದು ಮಾಡುತ್ತಿದ್ದರೆ ಒಳ್ಳೆಯವರಾ ಎಂದು ತನ್ವೀರ್ ಸೇಠ್ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿಯವರು ರಾಜಕೀಯ ಬೇಳೆ ಬೇಯಿಸಲು ಹುಬ್ಬಳ್ಳಿ ಗಲಭೆ ಕೇಸ್ ನ್ನು ದೊಡ್ಡದು ಮಾಡ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಯಾವುದೋ ಅಮಾಯಕರ ಮೇಲೆ ಕೇಸ್ ದಾಖಲಾಗಿದೆ, ಎಂದು ಸರಿಯಾಗಿ ವಿಚಾರ ಮಾಡಿ ತಪ್ಪು ಸರಿಪಡಿಸಿದೆ. ಅದರಲ್ಲಿ ಏನು ತಪ್ಪು ಎಂದು ತನ್ವೀರ್ ಸೇಠ್ ಹೇಳಿದ್ದಾರೆ.

ನಾನೂ ಸೇರಿದಂತೆ ಹಲವರು ಅಮಾಯಕರ ಮೇಲಿನ ಕೇಸ್ ವಾಪಸ್ ತಗೊಳ್ಳಿ ಎಂದು ಮನವಿ ಮಾಡಿದ್ದೆವು. ಅದನ್ನು ಪರಾಮರ್ಶೆ ನಡೆಸಿ, ಸರ್ಕಾರಕ್ಕಿರುವ ಕಾನೂನಿನ ಪರಿಮಿತಿಯಲ್ಲಿ ಕೇಸ್ ವಾಪಸ್ ತೆಗೆದುಕೊಂಡಿದ್ದಾರೆ ಎಂದು ತನ್ವೀರ್ ಸೇಠ್ ಸರ್ಕಾರದ ಕ್ರಮವನ್ನು ಸಮರ್ಥಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ಇಂದೂ ಮಳೆ ಬರುತ್ತಾ, ಇಲ್ಲಿದೆ ಹವಾಮಾನ ವರದಿ