Select Your Language

Notifications

webdunia
webdunia
webdunia
webdunia

ಸುನೀಲ್​​​ ವಶಕ್ಕೆ ಪಡೆಯಲು ಸೂಚನೆ

Notice to take custody of Sunil
bangalore , ಸೋಮವಾರ, 28 ನವೆಂಬರ್ 2022 (15:59 IST)
ಕಳೆದ ವಾರ ಸಿಸಿಬಿ ವತಿಯಿಂದ ರೌಡಿಗಳ ಮನೆ ಮೇಲೆ ದಾಳಿ ಮಾಡಿದ್ವಿ ಕೆಲವು ರೌಡಿಗಳು ಮನೆಯಲ್ಲಿ ಇರಲಿಲ್ಲ. ಇದ್ದವರನ್ನು ಸಿಸಿಬಿಗೆ ಕರೆತಂದು ವಿಚಾರಣೆ ಮಾಡಿದ್ವಿ ಅಂತಾ ಸಿಸಿಬಿ ಮುಖ್ಯಸ್ಥ ಡಾ.ಶರಣಪ್ಪ ಹೇಳಿಕೆ ನೀಡಿದ್ದಾರೆ.
ಅವತ್ತು ನಾಪತ್ತೆ ಆಗಿದ್ದ ಪ್ರಮುಖ 9 ರೌಡಿಗಳನ್ನ ಕರೆಸಿ ವಾರ್ನ್ ಮಾಡಿದ್ದಾರೆ. ಮುಲಾಮ, ರಾಜೇಂದ್ರ, ರೋಹಿತ್ ಗೌಡ, ಕುಮರೇಶ್, ಮಂಜು ಅಲಿಯಾಸ್ ಮಂಜುನಾಥ್, ಗಜ ಅಲಿಯಾಸ್ ಗಜೇಂದ್ರನನ್ನು ಕರೆಸಿ ವಿಚಾರಣೆ ಮಾಡಲಾಗಿದೆ.
ಸೈಲೆಂಟ್ ಸುನೀಲ ಅವತ್ತು ನಾಪತ್ತೆಯಾಗಿದ್ದ, ನಿನ್ನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಂತ ಮಾಹಿತಿ ಗೊತ್ತಾಗಿದೆ.
ನಮ್ಮ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಸುನೀಲ್​​ನನ್ನು ವಶಕ್ಕೆ ಪಡೆಯುವಂತೆ ವಿಚಾರಣೆ ಮಾಡಲು ಸೂಚನೆ ನೀಡಲಾಗಿದೆ. ಆತನ ಮೇಲೆ ಯಾವುದೇ ವಾರೆಂಟ್​​​ಗಳ ಪೆಂಡಿಂಗ್ ಸದ್ಯಕ್ಕೆ ಇಲ್ಲ. ಒಂದು ಕೇಸ್ ಹೈಕೋರ್ಟ್ ನಲ್ಲಿ ಪೆಂಡಿಂಗ್ ಇದೆ. ಈಗ ಆತನನ್ನು ಕರೆತರಲು ಅಧಿಕಾರಿಗಳಿಗೆ ಹೇಳಲಾಗಿದೆ ಎಂದು ಸಿಸಿಬಿ ಮುಖ್ಯಸ್ಥ ಶರಣಪ್ಪ ತಿಳಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಸುನೀಲ್ ಬಗ್ಗೆ ಪೊಲೀಸರು ಸೈಲೆಂಟ್​!