Publish Date: Mon, 28 Nov 2022 (13:31 IST)
Updated Date: Mon, 28 Nov 2022 (13:41 IST)
ಸಿಎಂ ಬಸವರಾಜ್ ಬೊಮ್ಮಾಯಿ ಇಂದು ದೆಹಲಿಗೆ ತೆರಳುತ್ತಿದ್ದೇನೆ.ಜೆಪಿ ನಡ್ಡಾರನ್ನ ಭೇಟಿಯಾಗುವ ಸಾಧ್ಯತೆ ಇದೆ.ಅವರಿನ್ನೂ ಸಮಯ ಕೊಟ್ಟಿಲ್ಲ.ಅವರು ಸಮಯ ಕೊಡ್ತಾರೆ ಅನ್ನೋ ವಿಶ್ವಾಸವಿದೆ.ಗಡಿ ವಿಚಾರವಾಗಿ ಹಿರಿಯ ಮುಕುಲ್ ರಹೊಟೊಗಿಯನ್ನ ಭೇಟಿಯಾಗುತ್ತೇನೆ ಎಂದು ಹೇಳಿದರು.
ಬಿಜೆಪಿಯವರು ಸಂವಿಧಾನವನ್ನೇ ತಿರುಚಿದ್ದಾರೆ ಅಂತ ಸಿದ್ದರಾಮಯ್ಯ ಆರೋಪ ವಿಚಾರವಾಗಿಯೂ ಸಿಎಂ ಪ್ರತಿಕ್ರಿಯಿಸಿದ್ದು,ಸಂವಿಧಾನ ತಿದಿದ್ದು ಕಾಂಗ್ರೆಸ್.ಎಮರ್ಜೆನ್ಸಿ ನಲ್ಲಿ ಸಂವಿಧಾನವನ್ನ ಕಾಂಗ್ರೆಸ್ ಗಾಳಿ ತೂರಿದ್ದು ,ವ್ಯಕ್ತಿ ಸ್ವತಂತ್ರವನ್ನ ಮೊಟಕು ಗೊಳಿಸಿ ಎಲ್ಲರನ್ನ ಜೈಲಿಗೆ ಹಾಕಿದ್ದು ಕಾಂಗ್ರೆಸ್.ಅವರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ ಎಂದು ಸಿದ್ದರಾಮಯ್ಯ ಗೆ ಸಿಎಂ ತಿರುಗೇಟು ನೀಡಿದ್ದಾರೆ.