Publish Date: Fri, 25 Nov 2022 (15:34 IST)
Updated Date: Fri, 25 Nov 2022 (15:48 IST)
ಕಾಂಗ್ರೆಸ್ ದಿವಾಳಿಯಾಗಿದೆ ಎಂಬ ಸಿಎಂ ಹೇಳಿಕೆ ಹೇಳಿಕೆಗೆ ಸಂಸದ ಡಿಕೆ ಸುರೇಶ್ ತಿರುಗೇಟು ನೀಡಿದ್ದಾರೆ.ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಗಳು ಬಹಳಷ್ಟು ಜನ ಇದ್ದಾರೆ.ಇದರ ಅರ್ಥ ಕಾಂಗ್ರೆಸ್ ಜನ ಬೆಂಬಲ ಇದೆ ಅಂತ ಆಯ್ತು.ಸಿಎಂ ಬಸವರಾಜ್ ಬೊಮ್ಮಾಯಿ ಕ್ಷೇತ್ರದಲ್ಲಿಯೇ 51 ಜನ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಗಳಿದ್ದಾರೆ.ಸಿಎಂ ಬೊಮ್ಮಾಯಿ ಆಡಳಿತ ವಿರುದ್ಧ ಜನರು ದಂಗೆ ಎಳುತಿದ್ದಾರೆ.ಚುನಾವಣೆಗೆ ನಾವು ಎಲ್ಲಾ ಹಂತದಲ್ಲಿ ತಯಾರಿ ಮಾಡಿಕೊಳ್ಳುತಿದ್ದೆವೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ.
ವರ್ತೂರ ಬಳಿಯ ಖಾಸಗಿ ಹೋಟೆಲ್ ನಲ್ಲಿ ಸಭೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು,ಟಿಕೆಟ್ ಆಕಾಂಕ್ಷಿಗಳು ,ಶಾಸಕರು,ಪಕ್ಷದನಾಯಕರು ಸಭೆಗೆ ಬರ್ತಾರೆ.ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸರ್ಕಾರ ಅಕ್ರಮಮಾಡಿದೆ.ಇಂದಿನ ಸಭೆಯಲ್ಲಿ ಈ ವೋಟರ್ ಐಡಿ ಪ್ರಕರಣ ಕುರಿತು ಚರ್ಚೆ ಆಗುತ್ತದೆ.ಈ ವೋಟರ್ ಐಡಿ ಹಗರಣದ ಕುರಿತು ಮುಂದಿನ ದಿನಗಳಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಅನ್ನೊದರ ಬಗ್ಗೆ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ಡಿಕೆ ಸುರೇಶ್ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.