Select Your Language

Notifications

webdunia
webdunia
webdunia
webdunia

ಸುನೀಲ್ ಬಗ್ಗೆ ಪೊಲೀಸರು ಸೈಲೆಂಟ್​!

Police are silent about Suni
bangalore , ಸೋಮವಾರ, 28 ನವೆಂಬರ್ 2022 (15:56 IST)
ಇತ್ತೀಚೆಗೆ ನಗರದ 86 ರೌಡಿಶೀಟರ್​​​ಗಳ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಆದ್ರೆ ಪೊಲೀಸರು ಪುಡಿ ರೌಡಿಗಳ ಮೇಲೆ ತಮ್ಮ ಪ್ರತಾಪ ತೋರಿಸಿ ಡಾನ್​ಗಳನ್ನು ಟಚ್ ಕೂಡ ಮಾಡದೆ ಸುಮ್ಮನಾಗಿದ್ದಾರೆ ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ನವೆಂಬರ್ 23ರಂದು ನಡೆದಿದ್ದ ದಾಳಿ ವೇಳೆ ಎಸ್ಕೇಪ್ ಆದ ಎಂದು ಹೇಳಲಾಗುತ್ತಿದ್ದ ಸೈಲೆಂಟ್ ಸುನೀಲ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ರಾಜಕೀಯ ಗಣ್ಯರೊಂದಿಗೆ ಕಾಣಿಸಿಕೊಂಡಿದ್ದಾನೆ. ಇತ್ತೀಚಿನ ದಾಳಿಯಲ್ಲಿ ಪೊಲೀಸರು ಪುಡಿ ರೌಡಿಗಳನ್ನ ಎತ್ತಾಕೊಂಡು ಬಂದು ಪ್ರತಾಪ ತೋರಿಸಿದ್ದಾರೆ. ಆದ್ರೆ ಪ್ರಮುಖ ರೌಡಿಗಳಾದ ಸೈಲೆಂಟ್ ಸುನೀಲ, ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಒಂಟೆ ರೋಹಿತ, ಕಾಡುಬೀಸನಹಳ್ಳಿ ರೋಹಿತ ಪರಾರಿಯಾಗಿದ್ದಾರೆಂದು ಸಿಸಿಬಿ ಪೊಲೀಸರು ಹೇಳಿಕೆ ಕೊಟ್ಟು ಸುಮ್ಮನಾಗಿದ್ದರು. ಇದರ ಬೆನ್ನಲ್ಲೇ ಈಗ ಅಂದು ಪರಾರಿಯಾಗಿದ್ದಾರೆಂದು ಹೇಳಿದ್ದ ಸೈಲೆಂಟ್ ಸುನೀಲ ನಿನ್ನೆ ಬಹಿರಂಗವಾಗಿ ರಾಜಕೀಯ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾನೆ. ರಾಜಕಾರಣಿಗಳ ಸಮ್ಮುಖದಲ್ಲೇ ಪ್ರತ್ಯಕ್ಷನಾಗಿದ್ದಾನೆ. ಹೀಗಾಗಿ ಪೊಲೀಸ್ ಇಲಾಖೆ ಬಗ್ಗೆ ಅನೇಕ ಅನುಮಾನಗಳು ಕಾಡುತ್ತಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಟವರ್‌ನಲ್ಲಿ ಸಿಕ್ಕಿಹಾಕಿಕೊಂಡ ಮಿನಿ ವಿಮಾನ