ಕರ್ನಾಟಕದ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಐದು ಗ್ಯಾರಂಟಿ ಘೋಷಣೆ ಮಾಡಿದ್ದಾರೆ.ನನ್ನ ಸೇರಿದಂತೆ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಫ್ರೀ ಅಂತೆ ಹೇಳಿದ್ರು.ಕರ್ನಾಟಕ 1.5 ಕೋಟಿ ಕುಟುಂಬಕ್ಕೆ ಈ ಯೋಜನೆ ಸಿಗಬೇಕು ಎಂದು ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಅಲ್ಲದೇ 200 ಯೂನಿಟ್ ಗೆ ವಿದ್ಯುತ್ ಗೆ ಯಾರು ಹಣ ಪಾವತಿಸುವುದು ಬೇಡ.ನಿರುದ್ಯೋಗಳಿಗೆ ಪ್ರತಿ ತಿಂಗಳು 3000ರೂಪಾಯಿ ಸಿಗಲಿ.ಅದೇ ರೀತಿಯಲ್ಲಿ ಅಕ್ಕಿ ಕೊಡ ಇದೆ ತಿಂಗಳಲ್ಲಿ ಉಚಿತವಾಗಿ ಕೊಡಲಿ.ರಾಜ್ಯದ ಎಲ್ಲಾ ಫಲಾನುಭವಿಗಳು ಇದೆ ತಿಂಗಳಿನಿಂದ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆ ಪಡೆದುಕೊಳ್ಳಿ.ಒಂದು ವೇಳೆ ಸಿಗದೇ ಇದ್ದರೆ ನಾವು ಸೇರಿಕೊಂಡು ಅವರಿಗೆ ನ್ಯಾಯ ಓದಗಿಸುತ್ತೇವೆ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ರು.