Publish Date: Mon, 22 May 2023 (14:09 IST)
Updated Date: Mon, 22 May 2023 (14:13 IST)
ನನಗೆ ಪ್ರಮಾಣವಚನ ರಾಜ್ಯಪಾಲರು ಕೊಟ್ಟಿದಾರೆ.22, 23, 24 ಮೂರು ದಿನ ಅಧಿವೇಶನ ಇದೆ ಎಂದು ಹಂಗಾಮಿ ಸ್ಪೀಕರ್ ಆರ್.ವಿ ದೇಶಪಾಂಡೆ ಹೇಳಿದ್ದಾರೆ.ಅಲ್ಲದೆ ನನ್ನ ಬಿಟ್ಟು 223 ಶಾಸಕರಿಗೆ ನಾನು ಪ್ರಮಾಣವಚನ ಕೊಡ್ತೀನಿ.ಇದು ಬಹಳದೊಡ್ಡ ಮಹತ್ವದ ಕಾರ್ಯ ಪ್ರಮಾಣ ವಚನದ ಬಳಿಕ ಸಂವಿಧಾನದ ಪ್ರಕಾರ ಎಲ್ಲರೂ ಶಾಸಕರಾಗಲಿದ್ದಾರೆ.24ಕ್ಕೆ ಸ್ಪೀಕರ್ ಆಯ್ಕೆ ನಡೆಯಲಿದೆ.ನಾನು ಪ್ರೊಸೀಡಿಂಗ್ ಆಫೀಸರ್ ಆಗಿ ಅಧಿಕಾರ ವಹಿಸಲಿದ್ದೇನೆ ಎಂದು ಹಂಗಾಮಿ ಸ್ಪೀಕರ್ ಆರ್.ವಿ ದೇಶಪಾಂಡೆ ಹೇಳಿದ್ರು.
ನೀವೇ ಸ್ಪೀಕರ್ ಆಗಿ ಮುಂದುವರೀತೀರಾ ಅನ್ನೋ ಪ್ರಶ್ನೆ ಗೆ ನನಗೆ ಯಾವುದೇ ಆಸೆ ಇಲ್ಲ.ಎಂಟು ಮುಖ್ಯಮಂತ್ರಿ ಜೊತೆ ಕೆಲಸ ಮಾಡಿದ್ದೇನೆ.ವೀರಪ್ಪ ಮೋಯ್ಲಿ, ಬಂಗಾರಪ್ಪ ಕಾಲದಲ್ಲಿ ಕೆಲಸ ಮಾಡಿದ್ದೇನೆ.ನಾಡಿನ ಜನರ ಮನಸ್ಸಿನಲ್ಲಿ ನಾನಿದ್ದೇನೆ.ಅವರು ನನ್ನಿಂದ ಸೇವೆ ಬಯಸಿದ್ದಾರೆ.ಸಚಿವಾಕಾಂಕ್ಷಿಗಳಾ ಅನ್ನೋ ವಿಚಾರಕ್ಕೆ ಪಕ್ಷ ಕೊಟ್ರೆ ಮಾಡ್ತೀನಿ, ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದ ದೇಶಪಾಂಡೆ ಹೇಳಿದ್ರು.ಸ್ಪೀಕರ್ ಆಗಿ ಮುಂದುವರೀತೀರಾ ಅನ್ನೋ ಪ್ರಶ್ನೆಗೆ ನಾನ್ಯಾಕೆ ಹೇಳಲಿ ಎಂದ್ರು.ಇನ್ನೂ ಸ್ಪೀಕರ್ ಬದಲು ಆರ್.ವಿ ದೇಶಪಾಂಡೆಆರ್ ವಿ ದೇಶಪಾಂಡೆ ಸಚಿವಕಾಂಕ್ಷಿಯಾಗಿದ್ದಾರೆ.