Select Your Language

Notifications

webdunia
webdunia
webdunia
webdunia

ನನ್ನ ಬಿಟ್ಟು ಬೇರೆ ಯಾರೂ ಸಿಎಂ ಆಗಲು ಸಾಧ್ಯವಿಲ್ಲ : ಕುಮಾರಸ್ವಾಮಿ

ಕುಮಾರಸ್ವಾಮಿ
ಶಿವಮೊಗ್ಗ , ಗುರುವಾರ, 4 ಮೇ 2023 (07:21 IST)
ಶಿವಮೊಗ್ಗ : 2023ರ ವಿಧಾನಸಭಾ ಚುನಾವಣೆಯಲ್ಲಿ ದೇವರ ಆಶೀರ್ವಾದ ಜೆಡಿಎಸ್ ಪಕ್ಷದ ಮೇಲಿದೆ. ಹೀಗಾಗಿ ಈ ಬಾರಿ ನನ್ನ ಬಿಟ್ಟು ಬೇರೆ ಯಾರೂ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
 
ಶಿವಮೊಗ್ಗದ ಎನ್ಇಎಸ್ ಮೈದಾನದಲ್ಲಿ ನಡೆದ ಜೆಡಿಎಸ್ ಚುನಾವಣಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಾಧ್ಯಮದಲ್ಲಿ ಪ್ರತಿನಿತ್ಯ ಒಂದೊಂದು ಸರ್ವೆ ವರದಿ ಬರುತ್ತಿದೆ. ಈ ಬಾರಿ ಜೆಡಿಎಸ್ 30 ರಿಂದ 35 ಸ್ಥಾನ ಬರದೇ ಇದ್ದರೆ ಆಗ ಪ್ರಶ್ನೆ ಮಾಡಿ ಎಂದು ಹೇಳಿದರು. 

ನನ್ನ ಸರ್ಕಾರದ ಅವಧಿಯಲ್ಲಿ ನಾನು ಕ್ಷೇತ್ರಗಳಿಗೆ ಕೊಟ್ಟ ಹಣದಿಂದ ಅಭಿವೃದ್ಧಿ ಆಗಿದೆ. ನಾನು ಅಭಿವೃದ್ಧಿಗೆ ಹಣ ಕೊಡದೇ 40 ಪರ್ಸೆಂಟ್ ಕಮೀಷನ್ ಹೊಡೆದಿದ್ದರೆ, 10 ಸಾವಿರ ಕೋಟಿ ರೂ. ಹೊಡೆಯಬಹುದಿತ್ತು. ಆದ್ರೆ ನಾನು ಲೂಟಿ ಹೊಡೆಯುವ ಕೆಲಸ ಮಾಡಲಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಜನರ ಮುಂದೆ ನರೇಂದ್ರ ಮೋದಿ ಭಾವುಕ