Select Your Language

Notifications

webdunia
webdunia
webdunia
Saturday, 5 April 2025
webdunia

ಜನರ ಮುಂದೆ ನರೇಂದ್ರ ಮೋದಿ ಭಾವುಕ

ರಾಜಕಾರಣ
ಬೆಂಗಳೂರು , ಗುರುವಾರ, 4 ಮೇ 2023 (07:05 IST)
ಕರ್ನಾಟಕದಲ್ಲಿ ಈಗ ವಿಮಾನ ನಿಲ್ದಾಣ, ಆಧುನಿಕ ರೈಲ್ವೆ ನಿಲ್ದಾಣಗಳು ಆಗುತ್ತಿವೆ. ಕರ್ನಾಟಕವನ್ನು ನಂ.1 ಮಾಡಲು ಬಿಜೆಪಿ ಯೋಜನೆ ರೂಪಿಸಿದೆ.
 
ಹಾಗಾಗಿ ಬಿಜೆಪಿಗೆ ಮತ ಹಾಕಿದರೆ, ದೇಶದಲ್ಲೇ ಕರ್ನಾಟಕವನ್ನು ನಂ.1 ಮಾಡಲು ಮತ ಹಾಕಿದಂತೆ ಎಂದು ಎಚ್ಚರಿಸಿದರು. ಕರ್ನಾಟಕದ ಜನ ಕಾಂಗ್ರೆಸ್, ಜೆಡಿಎಸ್ನ ಶಾರ್ಟ್ ಕಟ್ ಸರ್ಕಾರದ ಬಗ್ಗೆ ಎಚ್ಚರಬಾಗಿರಬೇಕು.

ಇದು 3ನೇ ಪೀಳಿಗೆಯ ಸಮಾಜ ಇದೆ. ಈ ಯುವ ಪೀಳಿಗೆ ಶಾರ್ಟ್ ಕಟ್ ನವರ ಕೈಗೆ ಅಧಿಕಾರ ಕೊಡುವುದಿಲ್ಲ. ದೇಶದಲ್ಲಿ ಅಸಮಾನತೆ ಹೋಗಲಾಡಿಸಿದ್ದು ಬಿಜೆಪಿ ಸರ್ಕಾರ, ಕರ್ನಾಟಕದಲ್ಲಿ ಬಿಜೆಪಿ ಸಮತೋಲನದ ಆಡಳಿತ ಮಾಡುತ್ತಿದೆ. ಒಗ್ಗಟ್ಟಿನಲ್ಲಿ ಕರ್ನಾಟಕ ಸರ್ಕಾರದ ಭವಿಷ್ಯ ಇದೆ ಎಂಬುದನ್ನ ಅರಿತು, ನೀವೆಲ್ಲರೂ ಬಿಜೆಪಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.

ಜನಸೇವೆಯೇ ಜನಾರ್ಧನ ಸೇವೆ. ಬಿಜೆಪಿ ನಿಮ್ಮ ಸೇವಕನಂತೆ ಕೆಲಸ ಮಾಡುತ್ತದೆ. ನಾನು ಸೇವಕನಂತೆ ಕೆಲಸ ಮಾಡುತ್ತಿರುವೆ. ಆದ್ರೆ ಕಾಂಗ್ರೆಸ್ ಸೇವೆ ದೆಹಲಿಯಲ್ಲಿನ ಕುಟುಂಬದ ಮೇಲೆ ಇದೆ. ಕಾಂಗ್ರೆಸ್ ರಿಮೋಟ್ ಇರುವುದು ದೆಹಲಿಯ ಒಂದು ಕುಟುಂಬದ ಮನೆಯಲ್ಲಿ. ಜೆಡಿಎಸ್ ಒಂದು ಪರಿವಾರದ ಪ್ರೈವೆಟ್ ಲಿಮಿಟೆಡ್ ಕಂಪನಿ. ಆದರೆ ಮೋದಿಗೆ ಈ ಕುಟುಂಬ ರಾಜಕಾರಣ ಗೊತ್ತಿಲ್ಲ. ಜನರೇ ನನ್ನ ಪರಿವಾರ, ನನ್ನ ಕುಟುಂಬ. ಜನರ ಸುಖ-ದುಃಖಗಳೇ ನನಗೆ ನನ್ನ ಕುಟುಂಬದ ಸುಖ-ದುಃಖಗಳಿದ್ದಂತೆ ಎಂದು ಭಾವುಕರಾದರು.


Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲೇ ಕರ್ನಾಟಕವನ್ನ ನಂ.1 ರಾಜ್ಯ ಮಾಡ್ತೀವಿ, ನಾನು ನಿಮ್ಮ ಸೇವಕ : ನರೇಂದ್ರ ಮೋದಿ