Select Your Language

Notifications

webdunia
webdunia
webdunia
webdunia

ಜೆಡಿಎಸ್, ಕಾಂಗ್ರೆಸ್ ಉಗ್ರಗಾಮಿಗಳ ಪರ ನಿಂತಿವೆ : ನರೇಂದ್ರ ಮೋದಿ

ಜೆಡಿಎಸ್, ಕಾಂಗ್ರೆಸ್ ಉಗ್ರಗಾಮಿಗಳ ಪರ ನಿಂತಿವೆ : ನರೇಂದ್ರ ಮೋದಿ
ಚಿತ್ರದುರ್ಗ , ಬುಧವಾರ, 3 ಮೇ 2023 (08:00 IST)
ಚಿತ್ರದುರ್ಗ : ಬಿಜೆಪಿಗೆ ಬೂಸ್ಟ್ ಕೊಡಲು ಮತ್ತೊಮ್ಮೆ ರಾಜ್ಯಕ್ಕೆ ಎಂಟ್ರಿ ಕೊಟ್ಟ ಪ್ರಧಾನಿ ಮೋದಿ, ಚಿತ್ರದುರ್ಗ, ಹೊಸಪೇಟೆ, ಸಿಂಧನೂರಿನಲ್ಲಿ ಆಯೋಜಿಸಿದ್ದ ಸಮಾವೇಶಗಳಲ್ಲಿ ಪಾಲ್ಗೊಂಡು ಮತಬೇಟೆ ನಡೆಸಿದರು.
 
ಇದೇ ವೇಳೆ ಕಾಂಗ್ರೆಸ್, ಜೆಡಿಎಸ್ ಉಗ್ರವಾದಿಗಳ ಪರವಿದೆ ಎಂಬ ಗಂಭೀರ ಆರೋಪ ಮಾಡಿದರು. ಸರ್ಜಿಕಲ್ ಸ್ಟ್ರೈಕ್ ನಡೆದಾಗ ಕಾಂಗ್ರೆಸ್ನವರು ಹೆಮ್ಮೆ ಪಡುವ ಬದಲು ಅಪಮಾನ ಮಾಡಿದರು ಎಂದು ದೂಷಿಸಿದ್ರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಬಡವರಿಗೆ ತಲುಪುವ ಯೋಜನೆಗಳು ನಿಲ್ಲುತ್ತವೆ. ಆದ್ದರಿಂದ ಕರ್ನಾಟಕದ ಅಭಿವೃದ್ಧಿಗಾಗಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ತರಬೇಕು ಎಂದು ಮನವಿ ಮಾಡಿದರು. 

ಕಾಂಗ್ರೆಸ್ ಇತಿಹಾಸ ಅವರ ಚಿಂತನೆಗಳನ್ನು ಮರೆಯಬಾರದು. ಆತಂಕ ಸೃಷ್ಟಿಸುವುದು ಕಾಂಗ್ರೆಸ್ ಇತಿಹಾಸ. ಕರ್ನಾಟಕದಲ್ಲಿ ಉಗ್ರ ಕೃತ್ಯಗಳು ನಡೆದಾಗ ಕಾಂಗ್ರೆಸ್ ಅವರ ಪರನಿಂತಿತು. ಜೆಡಿಎಸ್, ಕಾಂಗ್ರೆಸ್ ಎರಡೂ ಪಕ್ಷಗಳು ಉಗ್ರಗಾಮಿಗಳ ಪರ ನಿಂತಿವೆ. ಆದ್ರೆ ಬಿಜೆಪಿ ಆತಂಕವಾದಿಗಳು ಹಾಗೂ ಉಗ್ರವಾದಿಗಳನ್ನ ಶಮನಗೊಳಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿ ಕಾರಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ಮೇ 22 ರಿಂದ ಪಿಯುಸಿ ಪೂರಕ ಪರೀಕ್ಷೆ