Publish Date: Wed, 03 May 2023 (11:15 IST)
Updated Date: Wed, 03 May 2023 (11:18 IST)
ರಾಯಚೂರು : ಬಿಜೆಪಿಯವರು ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಪಂಚರತ್ನ ವಿಷಯಗಳನ್ನು ನಕಲು ಮಾಡಿದ್ದಾರೆ. ನಮ್ಮ ಹಲವು ಯೋಜನೆಗಳನ್ನು ಬಿಜೆಪಿಯವರು ಕಾಪಿ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ರೇಲ್ ಮಾದರಿಯ ನೀರಾವರಿ ಯೋಜನೆ ಸಮ್ಮಿಶ್ರ ಸರ್ಕಾರದ ಯೋಜನೆ. ಈಗ ಅದನ್ನು ಬಿಜೆಪಿಯವರು ನಕಲು ಮಾಡಿದ್ದಾರೆ.
ಮೂರು ಸಿಲಿಂಡರ್ ಕೊಡುತ್ತೇವೆ ಎನ್ನುತ್ತಾರೆ. ಅದರಿಂದ ಏನು ಉಪಯೋಗ? ಬಿಜೆಪಿಯವರು ಸಿಲಿಂಡರ್ ರೇಟ್ ನೆನಪಿಸಲು ಕೊಡುತ್ತಾರಾ? ಸರ್ಕಾರ ಇದ್ದಾಗಲೇ ಸಿಲಿಂಡರ್ ಕೊಡಬಹುದಿತ್ತು. ದಸರಾ ದೀಪಾವಳಿ ಗಣೇಶ ಹಬ್ಬಕ್ಕೊಂದು ಸಿಲಿಂಡರ್ ಕೊಡುತ್ತಾರ ಎಂದು ಪ್ರಶ್ನಿಸಿದರು.