Select Your Language

Notifications

webdunia
webdunia
webdunia
Saturday, 12 April 2025
webdunia

‘ಹಲಾಲ್ ವಿಚಾರಕ್ಕೆ ಮೂಗು ತೂರಿಸಲ್ಲ’

ಶಿಕ್ಷಣ ಸಚಿವ ಬಿ.ಸಿ. ನಾಗೇಶ್
bangalore , ಗುರುವಾರ, 31 ಮಾರ್ಚ್ 2022 (18:57 IST)
ಹಲಾಲ್ ಎಂಬುದು ಒಂದು ಧಾರ್ಮಿಕ ಆಚರಣೆಯಾಗಿದೆ. ಇದು ಸರ್ಕಾರದ ನಿಯಮವೇನು ಅಲ್ಲ. ಇದರಿಂದಾಗಿ ಸರ್ಕಾರ ಹಲಾಲ್‌ ವಿಚಾರದಲ್ಲಿ ಮೂಗು ತೋರಿಸುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲಾಲ್ ಎಂಬುದು ಒಂದು ಧಾರ್ಮಿಕ ಆಚರಣೆಯಾಗಿದೆ. ಅದು ನಿನ್ನೆ ಮೊನ್ನೆವರೆಗೆ ಯಾರಿಗೂ ಗೊತ್ತಿರಲಿಲ್ಲ. ಇದು ಸರ್ಕಾರದ ನಿಯಮವೇನೂ ಅಲ್ಲ. ಈ ವಿಷಯದಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ ಎಂದರು. ಹಲಾಲ್‍ ಇಷ್ಟವಿದ್ದವರು ಅಂಗಡಿಗಳಲ್ಲಿ ಸ್ವೀಕರಿಸುತ್ತಾರೆ. ಇಷ್ಟವಿಲ್ಲದವರು ಬೇರೆ ಅಂಗಡಿಗಳಲ್ಲಿ ಕೊಳ್ಳುತ್ತಾರೆ. ಇದನ್ನು ಜನರೇ ಮಾಡಿಕೊಂಡಿದ್ದಾರೆ ವಿನಃ ನಾವು ಮಾಡಿದ್ದಲ್ಲ. ಈ ವಿಷಯವನ್ನು ಜನರು ಎತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ತಮಗೆ ಬೇಕಾದ ವಿಷಯವನ್ನು ಎತ್ತುವ ಅಧಿಕಾರವಿದೆ. ಈ ವಿಷಯವನ್ನು ಸರ್ಕಾರವಾಗಲೀ, ಯಾವುದೇ ರಾಜಕೀಯ ಪಕ್ಷವಾಗಲೀ ಎತ್ತಿಲ್ಲ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಹಲಾಲ್ ಬಾಯ್ಕಾಟ್ ಅಭಿಯಾನ ಮುಂದುವರಿಕೆ