Publish Date: Thu, 31 Mar 2022 (16:43 IST)
Updated Date: Thu, 31 Mar 2022 (16:44 IST)
ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿರುವ ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಇದೇ ಯುಗಾದಿ ಹಬ್ಬಕ್ಕೆ ಅಂದರೆ ಏಪ್ರಿಲ್ 2 ರಂದು ಲಾಂಚ್ ಆಗುವುದಾಗಿ ಈಗಾಗಲೇ ಘೋಷಣೆಯಾಗಿದೆ.
ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ಹೀಗಾಗಿ ಎಲ್ಲಾ ಭಾಷೆಗಳಲ್ಲೂ ಅಂದು ದಿಗ್ಗಜ ಕಲಾವಿದರಿಂದ ಟೀಸರ್ ಲೋಕಾಪರ್ಣೆಯಾಗಲಿದೆ.
ಏಪ್ರಿಲ್ 2 ರಂದು ಬೆಳಿಗ್ಗೆ 9.55 ಕ್ಕೆ ತಮಿಳಿನಲ್ಲಿ ಸಿಲಂಬರಸನ್, ಮಲಯಾಳಂನಲ್ಲಿ ಸೂಪರ್ ಸ್ಟಾರ್ ಮೋಹನ್ ಲಾಲ್, ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಟೀಸರ್ ಬಿಡುಗಡೆ ಮಾಡಲಿದ್ದಾರೆ.