Select Your Language

Notifications

webdunia
webdunia
webdunia
webdunia

ಹಲಾಲ್ ಬಾಯ್ಕಾಟ್ ಅಭಿಯಾನ ಮುಂದುವರಿಕೆ

Continuing Halal Boycott Campaign
bangalore , ಗುರುವಾರ, 31 ಮಾರ್ಚ್ 2022 (18:55 IST)
ಹಲಾಲ್ ಬಾಯ್ಕಾಟ್ ಅಭಿಯಾನ ಬೆಂಗಳೂರಿನಲ್ಲಿ ಇಂದು ಕೂಡ ಮುಂದುವರೆದಿದೆ. ನಿನ್ನೆ ಬಸವನಗುಡಿಯಲ್ಲಿ ನಡೆದಿದ್ದ ಅಭಿಯಾನ ಇಂದು ಜಯನಗರದಲ್ಲಿ ಮುಂದುವರಿದಿದೆ. ನಿನ್ನೆ ಚಿಕನ್ ಶಾಪ್ ಗಳು, ಮನೆಗಳಿಗೆ ತೆರಳಿ ಹಲಾಲ್ ಇರುವ ವಸ್ತುಗಳನ್ನ ಖರೀದಿ ಮಾಡಬೇಡಿ ಎಂದು ಕರಪತ್ರ ಹಂಚಿಕೆ ಮಾಡಲಾಗಿದೆ. ಪುನೀತ್ ಕೆರೆಹಳ್ಳಿ, ಪ್ರಶಾಂತ್ ಸಂಬರ್ಗಿ, ರಾಷ್ಟ್ರರಕ್ಷಣಾ ಪಡೆಯ ಕಾರ್ಯಕರ್ತರು ಇಂದು ಜಯನಗರದಲ್ಲಿ ಅಭಿಯಾನ ಮಾಡಿ ಯುಗಾದಿ ಹೊಸ ತೊಡಕು ಸಂದರ್ಭದಲ್ಲಿ ಮುಸ್ಲಿಂ ಅಂಗಡಿಯಿಂದ ಮಟನ್ ಚಿಕನ್ ಖರೀದಿ ಮಾಡದೆ ಹಿಂದೂಗಳಿಂದ ಖರೀದಿಸಿ ಹಿಂದೂ ದೇವರುಗಳಿಗೆ ನೈವೇದ್ಯ ಮಾಡಿ ಎಂದು ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

7 ವರ್ಷದ ಹಿಂದೆ ನಾಪತ್ತೆಯಾದ ವ್ಯಕ್ತಿ ಪ್ರತ್ಯಕ್ಷ