ರಾಜ್ಯದಲ್ಲಿ ಹಿಜಾಬ್, ವ್ಯಾಪಾರ ಧರ್ಮದ ಬಳಿಕ ಈಗ ಹಲಾಲ್ ವಿವಾದ ಶುರುವಾಗಿದೆ. ಮುಸ್ಲಿಮರು ಮಾಂಸ ವ್ಯಾಪಾರದ ವೇಳೆ ಹಲಾಲ್ ಮಾಡುತ್ತಾರೆ. ಹಾಗಾಗಿ ಅವರ ಅಂಗಡಿಗಳಲ್ಲಿ ಮಾಂಸ ಖರೀದಿಸಿ ಹಬ್ಬಕ್ಕೆ ಬಳಸಬೇಡಿ ಎಂದು ಹಿಂದೂ ಜನಜಾಗೃತಿ ಸಮಿತಿ ಅಭಿಯಾನ ಕೈಗೊಂಡಿದೆ. ಹಲಾಲ್ ಸರ್ಟಿಫಿಕೇಟ್ ಕೊಡೋದು ಮುಸ್ಲಿಂ ಟ್ರಸ್ಟ್. FSSAI ಕೊಡೋ ಸರ್ಟಿಫಿಕೇಟ್ ಉನ್ನತವಾದದ್ದು. ಇದರ ನಡುವೆ ಹಲಾಲ್ ಸರ್ಟಿಫಿಕೇಟ್ ಯಾಕೆ ಬೇಕು? ಹಲಾಲ್ ಸರ್ಟಿಫಿಕೇಟ್ ನೀಡೋಕೆ ದುಡ್ಡು ಪಡೆಯುತ್ತಾರೆ. ಜಮಿಯತ್ ಉಲಾಮ ಐ ಹಿಂದ್ ಹಲಾಲ್ ಟ್ರಸ್ಟ್ ಹಲಾಲ್ ಸರ್ಟಿಫಿಕೇಟ್ ನೀಡುತ್ತೆ. ಈ ದುಡ್ಡನ್ನ ಹಿಜಾಬ್ ಹೋರಾಟ, ಹಿಂದೂ ವಿರೋಧಿ ಕಾನೂನು ಹೋರಾಟಕ್ಕೆ ಬಳಕೆ ಮಾಡಲಾಗುತ್ತದೆ ಎಂದಿದ್ದಾರೆ.