Select Your Language

Notifications

webdunia
webdunia
webdunia
webdunia

ಯುಗಾದಿ ವೇಳೆ ಹಲಾಲ್ ಮಾಂಸ ಬಹಿಷ್ಕಾರ?

ಯುಗಾದಿ ವೇಳೆ ಹಲಾಲ್ ಮಾಂಸ ಬಹಿಷ್ಕಾರ?
ಬೆಂಗಳೂರು , ಸೋಮವಾರ, 28 ಮಾರ್ಚ್ 2022 (14:04 IST)
ಬೆಂಗಳೂರು : ಹಿಂದೂ ದೇವಾಲಯಗಳಲ್ಲಿ ಮುಸ್ಲಿಂ ವರ್ತಕರಿಗೆ ಬಹಿಷ್ಕಾರ ಹಾಕಿದ ಬೆನ್ನಲ್ಲೇ ಮತ್ತೊಂದು ಬಹಿಷ್ಕಾರಕ್ಕೆ ಹಿಂದೂ ಜಾಗರಣ ವೇದಿಕೆ ಕರೆ ನೀಡಿದೆ.

ಯುಗಾದಿ ಹಬ್ಬದ ಮಾರನೇ ದಿನಕ್ಕೆ ಆಚರಿಸುವ ಹೊಸದುಡುಕಿಗೆ ಹಲಾಲ್ ಮಾಂಸ ಖರೀದಿ ಮಾಡದಂತೆ ಕರೆ ನೀಡಿದೆ.

ಈ ಬಗ್ಗೆ ಮಾತಾನಾಡಿರುವ ಹಿಂದೂ ಜಾಗರಣ ವೇದಿಕೆ ರಾಜ್ಯ ವಕ್ತಾರ ಮೋಹನ್ ಗೌಡ, ಭಾರತದಲ್ಲಿ ಇಂದು ಎಲ್ಲ ಉತ್ಪನ್ನಗಳಲ್ಲಿ ಹಲಾಲ್ ಪ್ರಮಾಣಪತ್ರವನ್ನು ಪಡೆಯುವ ಇಸ್ಲಾಮಿಕ್ ಷಡ್ಯಂತ್ರ್ಯದ ಪದ್ದತಿಯು ಶುರುವಾಗಿದೆ.

ಹಲಾಲ್ ಉತ್ಪನ್ನದ ಮೂಲಕ ಸಾವಿರಾರು ಕೋಟಿ ಹಣವನ್ನು ಜಿಹಾದಿ ಸಂಘಟನೆಗಳು, ಸಂಗ್ರಹ ಮಾಡಿ ಅದನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸುತ್ತಿದೆ ಎಂದು ಆರೋಪಿಸಿದರು. 

ಭಯೋತ್ಪಾದನೆಯ ಚಟುವಟಿಕೆಗಳಲ್ಲಿ ಭಾಗಿಯಾಗುವ ಭಯೋತ್ಪಾದಕರಿಗೆ ಭಾರತದಲ್ಲಿ ಹಲಾಲ್ ಪ್ರಮಾಣ ಪತ್ರ ನೀಡುವ ಇಸ್ಲಾಮಿಕ್ ಸಂಘಟನೆಗಳು ಅವರಿಗೆ ಕಾನೂನು ಸಹಾಯ ಮಾಡುತ್ತೀವೆ. ಈ ಹಲಾಲ್ ಪ್ರಮಾಣಪತ್ರಕ್ಕೆ ಯಾವುದೇ ಕಾಯ್ದೆಯ ಮಾನ್ಯತೆ ಇಲ್ಲ. ಇದು ಕಾನೂನು ಬಾಹಿರ ಪ್ರಮಾಣ ಪತ್ರವಾಗಿದೆ ಎಂದರು.

ಹಾಗಾಗಿ ಯಾವುದೇ ಕಾರಣಕ್ಕೂ ಹಿಂದೂಗಳು ಯುಗಾದಿಯ ಸಮಯದಲ್ಲಿ ಇರಬಹುದು. ಅನ್ಯ ಯಾವುದೇ ಸಮಯದಲ್ಲಿ ಹಲಾಲ್ ಮೌಂಸವನ್ನು ಬಳಸಬಾರದು ಮತ್ತು ಹಲಾಲ್ ಉತ್ಪನ್ನಗಳನ್ನು ಬಹಿಷ್ಕಾರ ಮಾಡಬೇಕು ಎಂದು ಕರೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾದಲ್ಲಿ ಅತಿದೊಡ್ಡ ಲಾಕ್‌ಡೌನ್!