ಬೆಂಗಳೂರು : ಕೋವಿಡ್ನಿಂದ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಸರ್ಕಾರ ನೀಡಿದ್ದ 50 ಸಾವಿರ ರೂ. ಪರಿಹಾರ ಧನವನ್ನು ಕರ್ನಾಟಕದ 893 ಕುಟುಂಬಗಳು ತಿರಸ್ಕರಿಸಿವೆ.
									
			
			 
 			
 
 			
					
			        							
								
																	ಎಪಿಎಲ್ ಮತ್ತು ಬಿಪಿಎಲ್ ಕಾರ್ಡುದಾರರಿಗೆ ಕೊರೊನಾ ಪರಿಹಾರ ಧನವು ಕೇಂದ್ರ ಸರ್ಕಾರದಿಂದ ಘೋಷಣೆಯಾಗಿತ್ತು. ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ಒಂದು ಲಕ್ಷ ರೂ. ಪರಿಹಾರ ಧನವನ್ನು ನೀಡಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟು 1.5 ಲಕ್ಷ ರೂ. ಪರಿಹಾರ ಧನವನ್ನು ಘೋಷಣೆ ಮಾಡಲಾಗಿತ್ತು. 
									
										
								
																	ಸರ್ಕಾರ ಪರಿಹಾರ ಘೋಷಣೆ ಮಾಡಿದರೂ ಕುಟುಂಬಗಳ ಅವರ ಹೆಸರಿನಲ್ಲಿ ಹಣವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿವೆ. ನಮಗೆ ಮೃತಪಟ್ಟವರ ಹೆಸರಿನಲ್ಲಿ ಸರ್ಕಾರದ ಹಣ ಬೇಡ. ಅದನ್ನು ಬಡವರಿಗೆ ನೀಡಿ ಎಂದು ಹೇಳಿವೆ. 
									
											
							                     
							
							
			        							
								
																	ರಾಜಧಾನಿ ಬೆಂಗಳೂರು ಒಂದರಲ್ಲೇ 521 ಕುಟುಂಬಗಳು ಕೋವಿಡ್ ಪರಿಹಾರ ಧನವನ್ನು ನಿರಾಕರಿಸಿವೆ.