ರಾಜ್ಯ ಸರ್ಕಾರವು ಕೇಂದ್ರದ ಮನವೊಲಿಸಲು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಆದರೂ ಸರ್ಕಾರ ಮಂಡಿಸಿದ ಈ ನಿರ್ಣಯಕ್ಕೆ ನಾವೆಲ್ಲಾ ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದೇವೆ.
ಪ್ರತಿಪಕ್ಷ ನಾಯಕರು ನಮ್ಮನ್ನೆಲ್ಲಾ ಕರೆದು ನಿರ್ಣಯದ ಕರಡು ಸಿದ್ಧ ಮಾಡಬೇಕಿತ್ತು ಎಂದು ಹೇಳಿದ್ದಾರೆ. ಆದರೆ ನೀರಾವರಿ ಬಗ್ಗೆ ಅಭಿಪ್ರಾಯ ಭೇದ ಇರಬಾರದು.
ನಮ್ಮ ನಿಲುವಿನಲ್ಲಿ ಗಟ್ಟಿತನ ಇಲ್ಲದಿರುವುದರಿಂದಲೇ ನಮ್ಮ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಅವರು ಕಾಂಗ್ರೆಸ್ ನಿಲುವಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.