Select Your Language

Notifications

webdunia
webdunia
webdunia
webdunia

ನಂದಿಧಾಮಕ್ಕೆ ಹರಿದು ಬಂದ ಪ್ರವಾಸಿಗರು

ನಂದಿಧಾಮಕ್ಕೆ ಹರಿದು ಬಂದ ಪ್ರವಾಸಿಗರು
ಚಿಕ್ಕಬಳ್ಳಾಪುರ , ಭಾನುವಾರ, 27 ಮಾರ್ಚ್ 2022 (10:04 IST)
ಚಿಕ್ಕಬಳ್ಳಾಪುರ : ಕೋವಿಡ್ ಕಾರಣದಿಂದ ವೀಕೆಂಡ್ ಲಾಕ್ಡೌನ್ ಆಗುತ್ತಿದ್ದ ವಿಶ್ವವಿಖ್ಯಾತ ನಂದಿಗಿರಿಧಾಮದ ನಿಯಮವನ್ನು ನಿನ್ನೆಯಿಂದ ತೆರವು ಮಾಡಲಾಗಿದೆ.

ಹೀಗಾಗಿ ಸಹಜವಾಗಿ ವೀಕೆಂಡ್ ನಲ್ಲಿ ನಂದಿಗಿರಿಧಾಮಕ್ಕೆ ಬೆಳ್ಳಂಬೆಳಗ್ಗೆ ಸಾವಿರಾರು ಮಂದಿ ಆಗಮಿಸಿದ್ದಾರೆ. ಪ್ರವಾಸಿಗರು ಕಾರು ಹಾಗೂ ಬೈಕ್ಗಳಲ್ಲಿ ನಂದಿಬೆಟ್ಟಕ್ಕೆ ಲಗ್ಗೆಯಿಟ್ಟಿದ್ದು, ನಂದಿಬೆಟ್ಟದಲ್ಲಿ ಕಾರು ಪಾರ್ಕಿಂಗ್ ಹೌಸ್ ಫುಲ್ ಆಗಿದೆ.

ಅಂದಹಾಗೆ ನಿನ್ನೆಯಿಂದ ಬೆಟ್ಟದ ಮೇಲ್ಭಾಗದಲ್ಲಿ 300 ನಾಲ್ಕು ಚಕ್ರದ ವಾಹನಗಳು ಹಾಗೂ 1,000 ದ್ವಿಚಕ್ರ ವಾಹನಗಳ ಪಾರ್ಕಿಂಗ್ ಮಾಡಲು ಸ್ಥಳಾವಕಾಶವಿದ್ದು, ಅಷ್ಟು ವಾಹನಗಳಿಗೆ ಮಾತ್ರ ಬೆಟ್ಟದ ಮೇಲೆ ಪ್ರವೇಶ ನೀಡಲಾಗುತ್ತಿದೆ. 

ಉಳಿದ ವಾಹನಗಳಿಗೆ ನಂದಿಬೆಟ್ಟದ ಚೆಕ್ ಪೋಸ್ಟ್ ಬಳಿಯೇ ತಡೆಯೊಡ್ಡಲಾಗಿದೆ. ಹೀಗಾಗಿ ಚೆಕ್ ಪೋಸ್ಟ್ ಬಳಿ ನೂರಕ್ಕೂ ಹೆಚ್ಚು ಕಾರುಗಳಲ್ಲಿ ಪ್ರವಾಸಿಗರು ಕಾಯುವಂತಾಗಿದೆ. ಮೇಲಿಂದ ವಾಹನ ವಾಪಸ್ ಬಂದ ನಂತರ ಮತ್ತೊಂದು ವಾಹನದ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಲ್ಯದಿಂದ ಪ್ರೇಮಿಗಳಾಗಿದ್ದ ಯುವ ಜೋಡಿ ಕ್ಲುಲ್ಲುಕ ವಿಚಾರಕ್ಕೆ ಆತ್ಮಹತ್ಯೆ