ಮೈಸೂರು : ಕರ್ನಾಟಕದಲ್ಲಿ ವಾರಾಂತ್ಯ ಕರ್ಫ್ಯೂ ತೆರವಾಗಿದೆ. ಆದರೂ ರಾಜ್ಯದ ಪ್ರವಾಸಿ ತಾಣಗಳತ್ತ ಜನರು ಸುಳಿಯುತ್ತಿಲ್ಲ.
									
			
			 
 			
 
 			
					
			        							
								
																	ಬಹುತೇಕ ಪ್ರವಾಸಿ ತಾಣಗಳು ಬಣಗುಡುತ್ತಿವೆ. ಸಾಮಾನ್ಯವಾಗಿ ಜನಸಂದಣಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದ್ದ ಮೈಸೂರು ಅರಮನೆ ಸುತ್ತಮುತ್ತಲೂ ಜನರು ಸುಳಿಯುತ್ತಿಲ್ಲ.
									
										
								
																	ವೀಕೆಂಡ್ ಕರ್ಪ್ಯೂ ಮುಕ್ತವಾದರೂ ಪ್ರವಾಸಿ ತಾಣಗಳಲ್ಲಿ ಜನರು ಕಾಣಿಸುತ್ತಿಲ್ಲ. ಕಳೆದ ವಾರ ವೀಕೆಂಡ್ ಕರ್ಪ್ಯೂ ಇದ್ದ ಕಾರಣ ಪ್ರವಾಸಿ ತಾಣಗಳಿಗೆ ಜನರು ಬಂದಿರಲಿಲ್ಲ. ಈ ವಾರವೂ ಅದೇ ಪರಿಸ್ಥಿತಿ ಮುಂದುವರಿದಿದೆ.
									
											
							                     
							
							
			        							
								
																	ಕೋವಿಡ್ ಲಸಿಕೆ ಹಾಕಿದವರಿಗೆ ಮಾತ್ರ ಮೈಸೂರು ಅರಮನೆಗೆ ಪ್ರವೇಶ ನೀಡಲಾಗಿದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡೇ ಅರಮನೆಯನ್ನು ವೀಕ್ಷಿಸಬೇಕೆಂದು ಪೊಲೀಸರು ನಿಯಮ ಮಾಡಿದ್ದಾರೆ.