Publish Date: Sun, 16 Jan 2022 (10:44 IST)
Updated Date: Sun, 16 Jan 2022 (10:49 IST)
ಬೆಂಗಳೂರು : ಕೊರೊನಾ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ.
ಕೆಆರ್ ಮಾರುಕಟ್ಟೆಯಲ್ಲಿ ಬೇಕಾಬಿಟ್ಟಿ ಓಡಾಡುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಬೆಳ್ಳಂಬೆಳಗ್ಗೆಯೇ ಫೀಲ್ಡ್ಗೆ ಇಳಿದಿರುವ ಪೊಲೀಸರು ಬ್ಯಾರಿಕೇಡ್ ಹಾಕಿ ಪರಿಶೀಲನೆ ನಡೆಸುತ್ತಿದ್ದಾರೆ.
ಪೊಲೀಸರ ಜೊತೆ ಬಿಬಿಎಂಪಿ ಮಾರ್ಷಲ್ಗಳು ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನರಿಂದ ತುಂಬಿರುತಿದ್ದ ಮಾರುಕಟ್ಟೆ ಸದ್ಯ ಖಾಲಿ ಖಾಲಿಯಾಗಿದೆ. ಇನ್ನು ನಗರದ ಹಲವೆಡೆ ವೀಕೆಂಡ್ ಕರ್ಪ್ಯೂ ನಡುವೆಯೂ ಮಾಂಸ ಖರೀದಿಯ ಭರಾಟೆ ಜೋರಾಗಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನ ಹಲವು ನಗರಗಳಲ್ಲಿ ಬೆಳ್ಳಂಬೆಳಗೆ ಮಾಂಸ ಅಂಗಡಿ ಮುಂದೆ ಜನ ಕ್ಯೂ ನಿಂತಿದ್ದಾರೆ. ಕ್ಯೂನಲ್ಲಿ ನಿಂತು ಮಾಂಸ ಖರೀದಿ ಮಾಡುತ್ತಿದ್ದಾರೆ.