Select Your Language

Notifications

webdunia
webdunia
webdunia
webdunia

ಪ್ರವಾಸಿತಾಣಗಳಿಗೆ ಟಫ್‍ರೂಲ್ಸ್ ಜಾರಿಯಾಗುತ್ತಾ..?

ಪ್ರವಾಸಿತಾಣಗಳಿಗೆ ಟಫ್‍ರೂಲ್ಸ್ ಜಾರಿಯಾಗುತ್ತಾ..?
ಮೈಸೂರು , ಶುಕ್ರವಾರ, 21 ಜನವರಿ 2022 (08:15 IST)
ಮೈಸೂರು : ಕೊರೊನಾ ಮೂರನೇ ಅಲೆಯ ದೊಡ್ಡ ಅಪಾಯ ಮೈಸೂರಿನ ಮೇಲೆ ಅಪ್ಪಳಿಸಿದೆ.

ಒಂದೇ ವಾರದಲ್ಲಿ ಮೈಸೂರಲ್ಲಿ ಕೊರೊನಾ ದೊಡ್ಡ ಮಟ್ಟದಲ್ಲಿ ಸ್ಫೋಟವಾಗಿವೆ. ಹೀಗಾಗಿ ಜಿಲ್ಲೆಯ ಪ್ರವಾಸಿತಾಣ ಸೇರಿದಂತೆ ಇತರ ಸಾರ್ವಜನಿಕ ಸ್ಥಳಗಳಲ್ಲಿ ಟಫ್ರೂಲ್ಸ್ ಜಾರಿ ತರಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.

ರಾಜ್ಯದ ಪ್ರವಾಸಿತಾಣಗಳಲ್ಲಿ ಒಂದಾಗಿರುವ ಹಾಗೂ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಮೈಸೂರಿಗೆ 3ನೇ ಅಲೆಯ ಭೀತಿ ಎದುರಾಗಿದೆ. ನೋಡನೋಡ್ತಿದ್ದಂತೆ ಕೊರೊನಾ ಬಿಗ್ಬ್ಲಾಸ್ಟ್ ಆಗಿ, ಪಾಸಿಟಿವಿಟಿ ರೇಟ್ ಹೆಚ್ಚಾಗಿದೆ. ಅಲ್ಲದೆ ರಾಜಧಾನಿ ಬೆಂಗಳೂರಿಗೆ ಹತ್ತಿರವಾದ ಕಾರಣ ದಿನನಿತ್ಯ ಕೆಲಸಕ್ಕಾಗಿ ಓಡಾಡುವರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ.

ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ರೈಲು ಹಾಗೂ ಬಸ್ಗಳ ಮೂಲಕ ಪ್ರಯಾಣಿಸುತ್ತಲೇ ಇರುತ್ತಾರೆ. ಇದಕ್ಕೆ ಕಡಿವಾಣ ಹಾಕುವುದೇ ಜಿಲ್ಲಾಡಾಳಿತಕ್ಕೆ ಸವಾಲಿನ ಕೆಲಸವಾಗಿದೆ.

ವೀಕೆಂಡ್ ಕರ್ಫ್ಯೂ ಹಾಗೂ ಸಿನಿಮಾ ಮಂದಿರಗಳಲ್ಲಿ ಸೀಟು ಭರ್ತಿಗೆ 50-50 ನಿಯಮ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಚಿತ್ರಮಂದಿರಗಳ ಮಾಲೀಕರು, ಇಂದಿನಿಂದ ಮೈಸೂರಿನಲ್ಲಿ ಚಲನಚಿತ್ರ ಮಂದಿರಗಳನ್ನು ಬಂದ್ ಮಾಡುವ ನಿರ್ಧಾರ ಪ್ರಕಟಿಸಿದ್ದಾರೆ.

ರೂಲ್ಸ್ ಮುಗಿಯೋವರೆಗೆ ಚಿತ್ರಮಂದಿರ ಬಂದ್ ಆಗಿರಲಿವೆ. ಇತ್ತ ಮೈಸೂರಂದ್ರೆ ಪ್ರವಾಸಿಗರ ಹಾಟ್ಸ್ಪಾಟ್. ಕೊರೊನಾ ಹೆಚ್ಚಾಗ್ತಿದ್ರೂ ಜಿಲ್ಲಾಡಳಿತ ಮಾತ್ರ ಪ್ರವಾಸಿತಾಣಗಳ ಮೇಲೆ ಕ್ರಮ ಕೈಗೊಂಡಿಲ್ಲ. ಹಾಗಾಗಿ ನಿತ್ಯ ಸಾವಿರಾರು ಸಂಖ್ಯೆಯ ಪ್ರವಾಸಿಗರು ಬರ್ತಾನೇ ಇದ್ದಾರೆ. ಈಗ ಕೊರೊನಾ ಡಬ್ಲಿಂಗ್ ಆಗ್ತಿರೋ ಹೊತ್ತಲ್ಲಿ ಪ್ರವಾಸಿತಾಣಗಳಿಗೆ ಕಠಿಣ ನಿಯಮ ತರುವ ಸಾಧ್ಯತೆ ಇದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮತಾಂತರ ಕಿರುಕುಳ : ವಿದ್ಯಾರ್ಥಿನಿ ಆತ್ಮಹತ್ಯೆ!