Select Your Language

Notifications

webdunia
webdunia
webdunia
webdunia

ಕೋವಿಡ್ ಬಗ್ಗೆ ಯಾವುದೇ ಆತಂಕಪಾಡುವ ಅಗತ್ಯವಿಲ್ಲ-ಆರೋಗ್ಯ ಇಲಖೆ ಆಯುಕ್ತ ರಂದೀಪ್

ಕೋವಿಡ್ ಬಗ್ಗೆ ಯಾವುದೇ ಆತಂಕಪಾಡುವ ಅಗತ್ಯವಿಲ್ಲ-ಆರೋಗ್ಯ ಇಲಖೆ ಆಯುಕ್ತ ರಂದೀಪ್
bangalore , ಮಂಗಳವಾರ, 19 ಡಿಸೆಂಬರ್ 2023 (15:41 IST)
ದಲಿತ ನಾಯಕ ಗೋವಿಂದ ಕಾರಜೋಳ ಮೇಲೆ ಹಲ್ಲೆಗೆ ಪ್ರಯತ್ನ ವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ನಗರದ ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ಪಿ ರಾಜೀವ್ ಪ್ರತಿಕ್ರಿಯಿಸಿದ್ದಾರೆ.ಹಲ್ಲೆಗೆ ಪ್ರೇರಣೆ ಮಾಡಿದವರು ಹೆಚ್ ಸಿ ಮಹದೇವಪ್ಪ, ಪ್ರಿಯಾಂಕ ಖರ್ಗೆಯವರು.ಎಸ್ಸಿಪಿ ಟಿಎಸ್ಪಿ ಹಣದ ದುರ್ಬಳಕೆ ಆಗಿರೋ ಬಗ್ಗೆ ದಲಿತರಿಗೆ ಗೊತ್ತಾದರೆ ದೊಡ್ಡ ಕ್ರಾಂತಿ ಆಗುತ್ತದೆ.ಈ ಭಯದಲ್ಲಿ ಕಾರಜೋಳ ಮೇಲೆ ಹಲ್ಲೆ ಮಾಡಿಸುವ ಕೆಲಸ ಮಾಡಿದ್ದಾರ.

10 ಸಾವಿರ ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.ಈ ಹಣವನ್ನು ದಲಿತರಿಗೆ ವಾಪಸ್ಸು ಮಾಡಬೇಕು.ದಲಿತರು ಜಾಗೃತ ರಾಗಬಾರದು ಎಂದು ಭಯವನ್ನು ಹುಟ್ಟಿಸಲು ಕಾರಜೋಳ ಮೇಲೆ ಹಲ್ಲೆ ಮಾಡಿಸಿದ್ದಾರೆ.ಯಾರು ಕೂಡ ಸರ್ಕಾರದ ವಿರುದ್ಧ ಈ ರೀತಿ ಜಾಗೃತಿ ಮಾಡಿಸಬಾರದೆಂದು ಸಂದೇಶ ನೀಡಿದ್ದಾರೆ.ಕಾಂಗ್ರೆಸ್ ನವರ ಕೈವಾಡ ದಿಂದಲೇ ಈ ಹಲ್ಲೆ ನಡೆದಿರೋದು.

ಮೊನ್ನೆ ವಿಧಾನಪರಿಷತ್ ನಲ್ಲಿ ದಲಿತರಿಗೆ ದಾರಿ ತಪ್ಪಿಸುವ ಉತ್ತರ ವನ್ನು ಪ್ರಿಯಾಂಕ ಖರ್ಗೆ, ಮಹದೇವಪ್ಪ ಕೊಟ್ಟಿದ್ದಾರೆ.ಇದಕ್ಕಾಗಿ ತೀವ್ರವಾಗಿ ನಾವು ರಾಜ್ಯದಲ್ಲಿ ಹೋರಾಟ ಮಾಡುತ್ತೇವೆ.ಪ್ರತಿ ದಲಿತರ ಶಾಸಕರ ಮನೆಗೆ ಭೇಟಿ ಕೊಟ್ಟು, ದಲಿತರಿಗೆ ಆಗಿರುವ ಅನ್ಯಾಯ ತಿಳಿಸುತ್ತೇವೆ.ದೊಡ್ಡ ಜನ ಜಾಗೃತಿ ಅಭಿಯಾನದ ಮೂಲಕ ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ಕಚೇರಿಯಲ್ಲಿ ಮಾಜಿ ಶಾಸಕ ಪಿ ರಾಜೀವ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಕ್ತಿ ಯೋಜನೆ ಹಣ ಖಾಲಿ ಖಾಲಿ