Select Your Language

Notifications

webdunia
webdunia
webdunia
webdunia

ಶಕ್ತಿ ಯೋಜನೆ ಹಣ ಖಾಲಿ ಖಾಲಿ

ಶಕ್ತಿ ಯೋಜನೆ ಹಣ ಖಾಲಿ ಖಾಲಿ
bangalore , ಮಂಗಳವಾರ, 19 ಡಿಸೆಂಬರ್ 2023 (15:20 IST)
ಶಕ್ತಿ ಯೋಜನೆಗೆ ಅನುದಾನದ ಕೊರತೆ ಎದುರಾಗಿದೆ.ಮಾರ್ಚ್ ತಿಂಗಳವರೆಗೆ 2800ಕೋಟಿ ರೂ ಅಂದಾಜಿಸಲಾಗಿದೆ.ಡಿಸೆಂಬರ್ ‌ಅಂತ್ಯಕ್ಕೂ ಮೋದಲೆ ಮೀಸಲಿಟ್ಟ ಹಣ ಸಂಪೂರ್ಣ ಖಾಲಿಯಾಗಿದೆ.ಈಗಾಗಲೇ 2,800ಕೋಟಿಯಲ್ಲಿ  2,778ಕೋಟಿ ಹಣ ಖಾಲಿಯಾಗಿದೆ.ಯೋಜನೆ ಯಶಸ್ಸಿನ ಬೆನ್ನೆಲ್ಲೇ ಅನುದಾನದ ಕೊರತೆಯ ಅತಂಕ ಶುರುವಾಗಿದೆ.
 
ಯೋಜನೆ ಮುಂದುವರಿಯಲು ಸರ್ಕಾರ ಇನ್ನಷ್ಟು ಅನುಧಾನ ನೀಡೋದು ಅನಿವಾರ್ಯವಾಗಿದೆ.ಶಕ್ತಿಯೋಜನೆಗೆ ಶಕ್ತಿ ತುಂಬಲು ಅನುದಾನ ಬಿಡುಗಡೆ ಮಾಡೋದು ಅನಿವಾರ್ಯವಾಗಿದೆ.ಸಾರಿಗೆ ಸಚಿವರಿಗೆ  ಅನುದಾನ ಕೊರತೆ ತಲೆನೋವಾಗಿದೆ.ಯೋಜನೆ 10ವರ್ಷಗಳವರೆಗೆ ಮುಂದುವರೆಯಲಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ರು.ಸರ್ಕಾರ ಹಣ ಬಿಡುಗಡೆ ಮಾಡದೇ ಇದ್ರೆ ಸಾರಿಗೆ ನಿಗಮಕ್ಕೆ ಆರ್ಥಿಕ ಸಂಕಷ್ಟ ಎದುರಾಗಲಿದೆ

.ರಾಜ್ಯದಲ್ಲಿ ಶಕ್ತಿ ಯೋಜನೆ‌ ಜೂನ್ 11ರಂದು ಜಾರಿಯಾಗಿತ್ತು.ಜೂನ್ 11ರಿಂದ ಡಿಸೆಂಬರ್ 17ವರೆಗೆ ಶಕ್ತಿಯೋಜನೆಯಡಿ ಬರೊಬ್ಬರಿ  31,73,48,773 ಮಹಿಳೆಯರು ಪ್ರಯಾಣಿಸಿದ್ದಾರೆ.ಶಕ್ತಿಯೋಜನೆಯಡಿ ಪ್ರಯಾಣಿಸಿದ ಮಹಿಳೆಯರ ಟಿಕೆಟ್ ಮೌಲ್ಯ 2778,72,85,831,ಅನುದಾನದ ಬಿಡುಗಡೆ ಮಾಡದಿದ್ರೆ ಸಂಕಷ್ಟಕ್ಕೆ  ಸಾರಿಗೆ ನಿಗಮಗಳು ಸಿಲುಕಲಿದೆ.ಇದರಿಂದ ನೌಕರರ ಸಂಬಳಕ್ಕೂ ಕುತ್ತು ಬೀಳುವ ಸಾಧ್ಯತೆ ಇದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮಲ್ಲೇಶ್ವರಂ 8 ನೇ ಮುಖ್ಯರಸ್ತೆಯಲ್ಲಿ ಅಗ್ನಿ ಅವಘಡ