Select Your Language

Notifications

webdunia
webdunia
webdunia
webdunia

ದಿಡೀರ್ ಹೃದಯಾಘಾತಕ್ಕೆ ಕೊರೋನಾವೇ ಕಾರಣ: ಒಪ್ಪಿಕೊಂಡ ಕೇಂದ್ರ ಆರೋಗ್ಯ ಸಚಿವರು?

ದಿಡೀರ್ ಹೃದಯಾಘಾತಕ್ಕೆ ಕೊರೋನಾವೇ ಕಾರಣ: ಒಪ್ಪಿಕೊಂಡ ಕೇಂದ್ರ ಆರೋಗ್ಯ ಸಚಿವರು?
ನವದೆಹಲಿ , ಮಂಗಳವಾರ, 31 ಅಕ್ಟೋಬರ್ 2023 (10:35 IST)
Photo Courtesy: Instagram
ನವದೆಹಲಿ: ಕೊರೋನಾ ಬಳಿಕ ಪದೇ ಪದೇ ಚಿಕ್ಕ ವಯಸ್ಸಿನವರೂ ದಿಡೀರ್ ಹೃದಯಾಘಾತಕ್ಕೊಳಗಾಗಿರುವ ಅನೇಕ ಸುದ್ದಿಗಳನ್ನು ಓದಿದ್ದೇವೆ, ನೋಡಿದ್ದೇವೆ.

ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್, ಚಿರಂಜೀವಿ ಸರ್ಜಾ ಮುಂತಾದವರು ಇದೇ ರೀತಿ ಸಾವನ್ನಪ್ಪಿದ್ದರು. ಕೆಲವರು ಇದಕ್ಕೆ ಕೊರೋನಾಗೆ ನೀಡಲಾದ ವ್ಯಾಕ್ಸಿನ್ ಕಾರಣ ಎನ್ನುತ್ತಿದ್ದರು.

ಆದರೆ ಇದಕ್ಕೆ ವ್ಯಾಕ್ಸಿನ್ ಅಲ್ಲ, ಕೊರೋನಾವೇ ಕಾರಣ ಎಂದು ಕೇಂದ್ರ ಆರೋಗ್ಯ ಸಚಿವರೇ ಸುಳಿವು ನೀಡಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ಗುಜರಾತಿನಲ್ಲಿ ಗಾರ್ಭ ನೃತ್ಯ ಮಾಡುತ್ತಿರುವಾಗ 10 ಮಂದಿ ಸಾವನ್ನಪ್ಪಿದ ಘಟನೆ ಬಗ್ಗೆ ಮಾತನಾಡುವಾಗ ಆರೋಗ್ಯ ಸಚಿವ ಮನ್ ಸುಖ್ ಈ ರೀತಿ ಹೇಳಿದ್ದಾರೆ.

ಇತ್ತೀಚೆಗೆ ದೇಶದಲ್ಲಿ ಸಂಭವಿಸುತ್ತಿರುವ ದಿಡೀರ್ ಹೃದಯಾಘಾತ ಪ್ರಕರಣಗಳಿಗೆ ಕೊರೋನಾ ಕಾರಣವಿರಬಹುದು ಎಂದಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಡೆಸಿರುವ ಅಧ್ಯಯನ ವರದಿಯನ್ನು ಉಲ್ಲೇಖಿಸಿ ಅವರು ಈ ರೀತಿ ಹೇಳಿದ್ದಾರೆ. ಕೊರೋನಾ ಪೀಡಿತರಾಗಿದ್ದವರು ಮುಂದಿನ ಎರಡು ವರ್ಷಗಳಿಗೆ ವಿಪರೀತ ವ್ಯಾಯಾಮ, ಚಟವಟಿಕೆಗಳನ್ನು ಮಾಡಬಾರದು ಎಂದಿದ್ದಾರೆ. ಆದರೆ ಕೊರೋನಾ ವ್ಯಾಕ್ಸಿನ್ ನಿಂದ ಯಾವುದೇ ಸಮಸ್ಯೆಯಾಗಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ಆಯೋಗ ವಿರುದ್ದ ವರುಣ್ ಗಾಂಧಿ ಕಿಡಿ