Publish Date: Thu, 26 Apr 2018 (18:42 IST)
Updated Date: Thu, 26 Apr 2018 (18:43 IST)
ಖ್ಯಾತ ಚಿತ್ರನಟ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಮಳವಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ರೋಡ್ ಷೋ ನಡೆಸಿದ್ರು.
ಜೆಡಿಎಸ್ ಅಭ್ಯರ್ಥಿ ಡಾ. ಕೆ.ಅನ್ನದಾನಿ ಪರ ಮತಯಾಚನೆ ಮಾಡಿದ್ರು. ನಿಖಿಲ್ ಕುಮಾರ್ ಆಗಮಿಸುತ್ತಿದ್ದಂತೆ ಅವರನ್ನು ನೋಡಲು ಅಭಿಮಾನಿಗಳ ದಂಡೇ ಹರಿದು ಬಂದಿತ್ತು.
ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಹಲಗೂರು-ಚನ್ನಪಟ್ಟಣ ರಸ್ತೆ, ಮುತ್ತತ್ತಿ ರಸ್ತೆ, ಹಾಡ್ಲಿ, ಡಣನಾಯಕನಪುರ, ಮಳವಳ್ಳಿ ಪಟ್ಟಣ, ಕಿರಗಾವಲು ಹೋಬಳಿಗಳ ವಿವಿಧ ಗ್ರಾಮಗಳು ಸೇರಿದಂತೆ ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಎಂ.ದೊಡ್ಡಿ, ದೊಡ್ಡರಸಿನಕೆರೆ, ಮದ್ದೂರು ಪಟ್ಟಣ ಹತ್ತು ಹಲವು ಗ್ರಾಮಗಳಲ್ಲಿ ನಿಖಿಲ್ ರೋಡ್ ಷೋ ನಡೆಸಿದ್ರು.
ನಿಖಿಲ್ ಸಾಗುವ ಮಾರ್ಗದುದ್ದಕ್ಕೂ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಹಾಗೂ ನಿಖಿಲ್ ಅಭಿಮಾನಿಗಳು ಬೈಕ್ ರ್ಯಾಲಿ ನಡೆಸಿದ್ರು. ರೋಡ್ ಶೋ ಸಂದರ್ಭ ಮಾತನಾಡಿದ ನಿಖಿಲ್ ಕುಮಾರ್ ಎರಡು ರಾಷ್ಟ್ರೀಯ ಪಕ್ಷಗಳಿಗೂ ಅಧಿಕಾರ ನೀಡಿದ್ದೀರಿ.
ಬಿಜೆಪಿಯವ್ರು ಸದನದಲ್ಲಿ ನೀಲಿ ಚಿತ್ರ ನೋಡಿದ್ರೆ, ಕಾಂಗ್ರೆಸ್ ನವ್ರು ಸುಳ್ಳು ಭರವಸೆ ನೀಡಿ ಜನರನ್ನ ವಂಚಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರು ನಿಮ್ಮ ದುಡ್ಡನ್ನೇ ಕೊಳ್ಳೆ ಹೊಡೆದು ನಿಮಗೇ ಹಂಚುತ್ತಿದ್ದಾರೆ ಎಂದು ಆರೋಪಿಸಿದ್ರು.
ಕಾಂಗ್ರೆಸ್ ಪಕ್ಷಕ್ಕೆ ರೈತರು, ಬಡವರ ಪರ ಕಾಳಜಿ ಇಲ್ಲ. ರೈತರ ಸಂಕಷ್ಟ ದೂರವಾಗಿಸಲು ಈ ಬಾರಿ ಜೆಡಿಎಸ್ ಬೆಂಬಲಿಸಿ ಎಂದು ಕರೆ ನೀಡಿದ ಅವ್ರು, ಮಳವಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಡಾ.ಕೆ. ಅನ್ನದಾನಿ ಅವ್ರನ್ನ ಗೆಲ್ಲಿಸುವುದರ ಮೂಲಕ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಮನವಿ ಮಾಡಿದ್ರು.