Publish Date: Mon, 23 Apr 2018 (18:50 IST)
Updated Date: Mon, 23 Apr 2018 (18:52 IST)
ಸಂಸದ ಪುಟ್ಟರಾಜು ಪರ ನಿಂತಿರುವ ಅನಿತಾ ಕುಮಾರಸ್ವಾಮಿ ಪುಟ್ಟರಾಜು ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಪುಟ್ಟರಾಜು ಅವರು ಕುಮಾರಸ್ವಾಮಿಗೆ ಸಹೋದರ ಇದ್ದಂತೆ. ನನಗೆ ಮೈದುನ ಇದ್ದಂತೆ ಎಂದಿದ್ದಾರೆ.
ಈ ನಾಡಿನ ಹಿತ ಕಾಯುವುದು ಜೆಡಿಎಸ್ ಮಾತ್ರ. ಹೀಗಾಗಿ ಪುಟ್ಟರಾಜುಗೆ 30 ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿಮಾಡಿದ್ದಾರೆ. ಹಸಿರು ಶಾಲು ಹಾಕಿಕೊಂಡ ಮಾತ್ರಕ್ಕೆ ರೈತ ನಾಯಕರು ಆಗಲು ಸಾಧ್ಯವಿಲ್ಲ. ಮನಸ್ಸಿನಿಂದ ಬಂದರೆ ಮಾತ್ರ ರೈತ ನಾಯಕ ಎಂದು ಕರೆಯಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಸ್ವಯಂ ಘೋಷಿತ ಎಂದು ಹೇಳಿಕೊಂಡು ಓಡಾಡುವವರಿಗೆ ಮತ ಕೊಡಬೇಡಿ. ನಾಳೆ ನಿಮ್ಮ ಕಷ್ಟ ನೋಡಲು ಯಾರೂ ಬರೋದಿಲ್ಲ ಎಂದು ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ವಿರುದ್ಧ ಅನಿತಾ ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.