Publish Date: Thu, 26 Apr 2018 (17:54 IST)
Updated Date: Thu, 26 Apr 2018 (17:56 IST)
ಮೈಸೂರು: ಸಿಎಂ ಸಿದ್ದರಾಮಯ್ಯನವರಿಗೆ ಸರಿಯಾಗಿ ಉತ್ತರ ನೀಡಿದ ಮರಿಸ್ವಾಮಿ ಹೇಳಿಕೆಯಿಂದ ಕಾರ್ಯಕರ್ತರಿಗೆ ಧೈರ್ಯ ಬಂದಿದೆ. ಮರಿಸ್ವಾಮಿ ಇರೋದನ್ನೇ ಬಹಿರಂಗವಾಗಿ ಸಿಎಂಗೆ ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸಿಎಂಗೆ ಪ್ರಶ್ನೆ ಮಾಡಿದ ಜೆಡಿಎಸ್ ಕಾರ್ಯಕರ್ತ ಮರಿಸ್ವಾಮಿಗೆ ಸನ್ಮಾನ ಮಾಡಿ ಮಾತನಾಡಿದ ಅವರು, ನಿನ್ನೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಪ್ರಚಾರದ ವೇಳೆ ಕಾಂಗ್ರೆಸ್ ಗೆ ಓಟ್ ಹಾಕೋಲ್ಲ. ಬದಲಾಗಿ ಜೆಡಿಎಸ್ ಗೆ ಮತ ಹಾಕ್ತಿನಿ ಜಿಟಿಡಿಗೆ ಮತಹಾಕ್ತಿನಿ. ಜೆಡಿಎಸ್ ಗೆ ಜೈ ಕಾಂಗ್ರೆಸ್ ಗೆ ಧಿಕ್ಕಾರ ಎಂದಿದ್ದರು ಮರಿಸ್ವಾಮಿ.
ಸಿಎಂ ಸಿದ್ದರಾಮಯ್ಯ.ನಿನ್ನೆ ಪ್ರಚಾರದ ವೇಳೆ ಕರೆದಿದ್ದ ಸಿಎಂಗೆ ನಾನು ಕಾಂಗ್ರೆಸ್ ಗೆ ಬರಲ್ಲ. ಕುಮಾರಸ್ವಾಮಿ ಯನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಸಿದ್ದಲಿಂಗಪುರದ ಗ್ರಾಪಂ ಸದಸ್ಯರಾದ ಮರಿಸ್ವಾಮಿ ಹೇಳಿದ್ದರು.