Select Your Language

Notifications

webdunia
webdunia
webdunia
webdunia

ಚನ್ನಪಟ್ಟಣದಲ್ಲಿಯೇ ವಾಸಿಸಲು ಬಾಡಿಗೆಗೆ ಮನೆ ಪಡೆದ ಎಚ್.ಎಂ.ರೇವಣ್ಣ

ಚನ್ನಪಟ್ಟಣದಲ್ಲಿಯೇ ವಾಸಿಸಲು ಬಾಡಿಗೆಗೆ ಮನೆ ಪಡೆದ ಎಚ್.ಎಂ.ರೇವಣ್ಣ
ಚನ್ನಪಟ್ಟಣ , ಗುರುವಾರ, 26 ಏಪ್ರಿಲ್ 2018 (18:11 IST)
ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಎಮ್.ರೇವಣ್ಣ ಚನ್ನಪಟ್ಟಣದಲ್ಲಿಯೇ ವಾಸಿಸಲು ಬಾಡಿಗೆಗೆ ಮನೆ ಪಡೆದಿದ್ದಾರೆ. 
ಇವತ್ತು ಬಾಡಿಗೆ ಮನೆಯಲ್ಲಿ ಕುಟುಂಬ ಸಮೇತವಾಗಿ ವಿಶೇಷ ಹೋಮ ನೆರವೇರಿಸುವ ಮೂಲಕ ನೂತನ ಮನೆಗೆ ಗೃಹ ಪ್ರವೇಶ ಮಾಡಿದ್ರು. ಚನ್ನಪಟ್ಟಣದಲ್ಲಿ ಚುನಾವಣೆ ಕಾವು ಜೋರಾಗಿದ್ದು, ಒಂದೆಡೆ ಜೆಡಿಎಸ್ ನಿಂದ ಹೆಚ್.ಡಿ.ಕುಮಾರ್ ಸ್ವಾಮಿ ಸ್ವರ್ಧಿಸಿದ್ರೆ, ಮತ್ತೊಂದೆಡೆ ಬಿಜೆಪಿ ಸಿ.ಪಿ.ಯೋಗೇಶ್ವರ್ ಅಖಾಡದಲ್ಲಿ ಇದ್ದಾರೆ. 
 
ಹೀಗಾಗಿ ಸ್ಥಳೀಯವಾಗಿಯೇ ಮನೆ ಮಾಡಿದ್ರೆ ಪಕ್ಷ ಸಂಘಟನೆ ಜೊತೆಗೆ ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ಗೆ ಸ್ವರ್ಧೆ ನೀಡಲು ಸಾಧ್ಯ ಎಂದು ಚನ್ನಪಟ್ಟಣದ ಕೆಹೆಚ್ ಬಿ ಕಾಲೋನಿಯಲ್ಲಿ ಮನೆ ಮಾಡಿದ್ದಾರೆ. ಈ ಮೂಲಕ ಇಬ್ಬರು ನಾಯಕರಿಗೆ ಟಾಂಗ್ ನೀಡಲು ಮುಂದಾಗಿದ್ದಾರೆ. 
 
ಇವತ್ತು ಬೆಳಗ್ಗೆಯೇ ವಿಶೇಷ ಪೂಜೆಯನ್ನ ರೇವಣ್ಣ ನೆರವೇರಿಸಿದ್ರು. ಇನ್ನೂ ರೇವಣ್ಣರಿಗೆ ಪತ್ನಿ ವತ್ಸಲಾ, ಮಗ ಶಶಾಂಕ್ ಕೂಡ ಸಾಥ್ ನೀಡಿದ್ರು. ನಾಳೆಯಿಂದ ಅಧಿಕೃತವಾಗಿ ಪ್ರಚಾರಕ್ಕೆ ರೇವಣ್ಣ ಇಳಿಯಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡ ಖರ್ಗೆ