Select Your Language

Notifications

webdunia
webdunia
webdunia
webdunia

ಹೈವೇ ಪ್ರಾಧಿಕಾರ ನಿರ್ಲಕ್ಷ್ಯ

ಹೈವೇ ಪ್ರಾಧಿಕಾರ ನಿರ್ಲಕ್ಷ್ಯ
ಬೆಂಗಳೂರು , ಸೋಮವಾರ, 17 ಜನವರಿ 2022 (15:44 IST)
ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ದುರಸ್ತಿ ಕಾಮಗಾರಿಯಿಂದಾಗಿ ಸಂಚಾರ ದಟ್ಟಣೆ ತೀವ್ರಗೊಂಡು ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಕ್ಷಣವೇ ಅಧಿಕಾರಿಗಳು ಎಚ್ಚೆತ್ತುಕೊಂಡು ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಆದರೆ ಕಾಮಗಾರಿ ನಿಗದಿತ ಅವಧಿಯಲ್ಲಿ ಮುಗಿಯದೇ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
 
ಮೇಲ್ಸೇತುವೆಯ ಲಿಂಕ್‍ಗಳನ್ನು ಸರಿಪಡಿಸಲು ಕೇಬಲ್ ಟೈಟ್ ಕಾಮಗಾರಿ ಆರಂಭಿಸಲಾಗಿದೆ. ಇದು ಜ.14ಕ್ಕೆ ಮುಗಿಯಲಿದೆ ಎಂಬ ಭರವಸೆ ನೀಡಲಾಗಿತ್ತು. ಆದರೆ ಸದ್ಯದ ಕಾಮಗಾರಿ ವೇಗ ನೋಡಿದರೆ ಇನ್ನು 15-20 ದಿನಗಳಾದರೂ ಪೂರ್ಣಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ.
 
ಒಂದು ತಂಡ ಮಾತ್ರ ಕೇಬಲ್ ಟೈಟ್ ಕಾಮಗಾರಿಯಲ್ಲಿ ತೊಡಗಿಸಿಕೊಂಡಿದೆ. ಕನಿಷ್ಠ ಮೂರು ತಂಡಗಳು ಕಾರ್ಯಾಚರಣೆ ನಡೆಸಿದರೆ ನಿಗದಿತ ಅವಧಿಯಲ್ಲಿ ಕೆಲಸ ಮುಗಿಸಬಹುದಿತ್ತು. ಆದರೆ ಒಂದು ತಂಡ ಮಾತ್ರ ಕೆಲಸ ನಿರ್ವಹಿಸುತ್ತಿದೆ. ಇದರಿಂದ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದೆ.
 
ಮೇಲ್ಸೇತುವೆ ಇಲ್ಲದೆ ಇದ್ದುದ್ದರಿಂದ 8ನೇ ಮೈಲಿಯಿಂದ ಯಶವಂತಪುರದವರೆಗೆ ಸಂಚಾರ ದಟ್ಟಣೆ ಮಿತಿಮೀರಿದೆ. ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುವ ಸುಮಾರು 25 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯಲ್ಲಿ ಮೇಲ್ಸೇತುವೆ ದುರಸ್ತಿ ಕಾಮಗಾರಿ ವಿಳಂಬವಾಗಿ ನಡೆಯುತ್ತಿರುವುದು ಜನರ ಆಕ್ರೋಶಕ್ಕೆ ಗುರಿಯಾಗಿದೆ.
 
ಸುಮಾರು 7-8 ಕಿ.ಮೀ ದೂರವನ್ನು ಕ್ರಮಿಸಲು ಒಂದರಿಂದ 2 ಗಂಟೆಗಳ ಕಾಲ ವ್ಯಯಿಸಬೇಕಾದ ಅನಿವಾರ್ಯತೆ ವಾಹನ ಸವಾರರದ್ದಾಗಿದೆ.ಮೇಲ್ಸೇತುವೆ ಇದ್ದ ವೇಳೆ ಸುಮಾರು 7ರಿಂದ ಹತ್ತು ನಿಮಿಷಗಳ ಅವಯಲ್ಲಿ ಪ್ರಯಾಣಿಸಬಹುದಿತ್ತು. ದುರಸ್ತಿ ಕಾಮಗಾರಿಗಾಗಿ ಸೇತುವೆ ಸಂಚಾರ ನಿಷೇಸಲಾಗಿದೆ. ಕೆಳಭಾಗದಲ್ಲಿ ಸಂಚರಿಸುವ ವಾಹನಗಳು ಪರದಾಡುವಂತಾಗಿದೆ

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಗೆ ಕೊರೊನಾ ನೆಗೆಟಿವ್