Select Your Language

Notifications

webdunia
webdunia
webdunia
webdunia

ಕೆಜಿಎಫ್ ಕತೆಯನ್ನೇ ಹೋಲುತ್ತಿದ್ದ ಪುಷ್ಪ! ಫ್ಯಾನ್ಸ್ ಟೀಕೆ

ಕೆಜಿಎಫ್
ಬೆಂಗಳೂರು: ಅಲ್ಲು ಅರ್ಜುನ್ ನಾಯಕರಾಗಿರುವ ಪುಷ್ಪ ಸಿನಿಮಾ ಥಿಯೇಟರ್ ನಲ್ಲಿ ಅಬ್ಬರಿಸಿ ಈಗ ಒಟಿಟಿಯಲ್ಲೂ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಈ ಸಿನಿಮಾವನ್ನು ಕೆಜಿಎಫ್ ಗಿಂತ ಉತ್ತಮ ಎಂದು ತೆಲುಗು ನಿರ್ದೇಶಕರೊಬ್ಬರು ನೀಡಿದ್ದ ಹೇಳಿಕೆ ಭಾರೀ ಟ್ರೋಲ್ ಗೊಳಗಾಗಿತ್ತು.

ಈಗ ಒಟಿಟಿಯಲ್ಲೂ ಸಿನಿಮಾ ವೀಕ್ಷಿಸಿದ ಕೆಲವು ಫ್ಯಾನ್ಸ್‍ ಈ ಸಿನಿಮಾ ಕತೆ ಕೆಜಿಎಫ್ ಸಿನಿಮಾವನ್ನೇ ಹೋಲುತ್ತಿದ್ದೆ ಎಂದು ಟೀಕಿಸಿದ್ದಾರೆ. ಕೆಜಿಎಫ್ ನಲ್ಲಿ ಗಣಿಗಾರಿಕೆ ಬಗ್ಗೆ ಕತೆಯಿದ್ದರೆ ಇಲ್ಲಿ ರಕ್ತಚಂದನ ಕಳ್ಳಸಾಗಣೆ ಬಗ್ಗೆ ಕತೆಯಿದೆ. ಎರಡೂ ಕತೆಗಳೂ ಹೆಚ್ಚು ಕಡಿಮೆ ಒಂದೇ ರೀತಿಯಿದೆ ಎನ್ನುವುದು ಫ್ಯಾನ್ಸ್ ಅಭಿಪ್ರಾಯ.

ಕೆಜಿಎಫ್ ನಂತೆಯೇ ಎರಡನೇ ಭಾಗದಲ್ಲಿ ನಾಯಕ ತನ್ನ ಜಗತ್ತು ಆಳುವ ಕತೆಯಿದೆ.ಹೀಗಾಗಿ ಎರಡೂ ಸಿನಿಮಾಗೂ ಸಾಮ್ಯತೆಯಿದೆ. ಕೆಜಿಎಫ್ ಕತೆಯನ್ನು ನೋಡಿಯೇ ಈ ಸಿನಿಮಾ ಮಾಡಲಾಗಿದೆ ಎಂದು ಫ್ಯಾನ್ಸ್ ಟೀಕಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾಮರಾ ಮುಂದೆ ಮೈಮೇಲಿದ್ದ ಟವೆಲ್ ಕಿತ್ತು ಬಿಸಾಕಿದ ನಿವೇದಿತಾ ಗೌಡ!