Select Your Language

Notifications

webdunia
webdunia
webdunia
webdunia

ಭಾರತದೊಂದಿಗೆ ಹೊಸ ಮುಕ್ತ ವ್ಯಾಪಾರ ಒಪ್ಪಂದ

New Free Trade Agreement with India
ಬ್ರಿಟನ್ , ಮಂಗಳವಾರ, 29 ನವೆಂಬರ್ 2022 (17:17 IST)
ಇಂಡೋ-ಪೆಸಿಫಿಕ್ ಪ್ರದೇಶದೊಂದಿಗೆ ಬಾಂಧವ್ಯವನ್ನು ಹೆಚ್ಚಿಸುವ ದೇಶದ ವಿಶಾಲ ದೃಷ್ಟಿಕೋನದ ಭಾಗವಾಗಿ ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ  ಬದ್ಧತೆಯನ್ನು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪುನರುಚ್ಚರಿಸಿದ್ದಾರೆ. ಕಳೆದ ತಿಂಗಳು ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ರಿಷಿ,  ವಿದೇಶಾಂಗ ನೀತಿ ಕುರಿತಾದ ಅವರ ಮೊದಲ ಭಾಷಣದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚೀನಾ ವಿಷಯಕ್ಕೆ ಬಂದಾಗ ವಿಭಿನ್ನ ನಿರ್ಧಾರಗಳ ವಾಗ್ದಾನ ಮಾಡಿದ ಅವರು, ಬ್ರಿಟಿಷ್ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ಚೀನಾ ವ್ಯವಸ್ಥಿತ ಸವಾಲಾಗಿದೆ ಎಂದು ಹೇಳಿದರು. ‘ನಾನು ರಾಜಕೀಯಕ್ಕೆ ಬರುವ ಮೊದಲು, ಪ್ರಪಂಚದಾದ್ಯಂತದ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದ್ದೇನೆ ಮತ್ತು ಇಂಡೋ ಪೆಸಿಫಿಕ್‌ನಲ್ಲಿನ ಅವಕಾಶಗಳು ವಿಫುಲವಾಗಿವೆ' ಎಂದು ಸುನಕ್ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಫೈಟರ್​ ರವಿನೂ ಗೊತ್ತಿಲ್ಲ, ಆ್ಯಕ್ಟರ್​ ರವಿನೂ ಗೊತ್ತಿಲ್ಲ-ಡಾ.ಕೆ.ಸುಧಾಕರ್