Select Your Language

Notifications

webdunia
webdunia
webdunia
webdunia

ಕಠಿಣ ಲಾಕ್‌ಡೌನ್ ಹೇರಿಕೆ ಸಮರ್ಥಿಸಿಕೊಂಡ ಚೀನಾ

ಕಠಿಣ ಲಾಕ್‌ಡೌನ್ ಹೇರಿಕೆ ಸಮರ್ಥಿಸಿಕೊಂಡ ಚೀನಾ
ಚೀನಾ , ಮಂಗಳವಾರ, 29 ನವೆಂಬರ್ 2022 (16:47 IST)
ಚೀನಾ ದೇಶದಲ್ಲಿ ಕೋವಿಡ್‌ ಹೊಸ ಪ್ರಕರಣಗಳು ಉಲ್ಬಣಿಸುತ್ತಿರುವ ನಡುವೆ ಕಠಿಣ ಲಾಕ್‌ಡೌನ್‌ ವಿರೋಧಿಸಿ ನಾಗರಿಕರು ಅಧ್ಯಕ್ಷ ಷಿ ಜಿನ್‌ಪಿಂಗ್‌ ಆಡಳಿತದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗಳು ತಣ್ಣಗಾಗಿಲ್ಲ. ಆದರೂ ನಾಗರಿಕರ ಒತ್ತಡಕ್ಕೆ ಮಣಿಯದ ಸರ್ಕಾರ, ಕಠಿಣ ಲಾಕ್‌ಡೌನ್‌ ಹೇರಿಕೆಯನ್ನು ಸಮರ್ಥಿಸಿಕೊಂಡಿದೆ. ಕಠಿಣ ಲಾಕ್‌ಡೌನ್‌ ಹೇರಿದ್ದ ಷಿನ್‌ಜಿಯಾಂಗ್ ಪ್ರಾಂತೀಯ ರಾಜಧಾನಿ ಉರುಮ್ಕಿ ನಗರದಲ್ಲಿ ಅ‍ಪಾರ್ಟ್‌ಮೆಂಟ್‌ವೊಂದರಲ್ಲಿ ಕಳೆದ ವಾರ ಬೆಂಕಿ ಕಾಣಿಸಿ, 10 ಜನರು ‌ಮೃತಪಟ್ಟಿದ್ದರು. ಹಾನ್ ಚೀನಿ ಪ್ರಜೆಗಳು ಮತ್ತು ಉಯಿಗರ್‌ ಮುಸ್ಲಿಮರು ಒಟ್ಟಾಗಿ ಚೀನಿ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು. ಉರುಮ್ಕಿ ನಗರದಲ್ಲಿ ವ್ಯಾಪಕವಾಗಿದ್ದ ಪ್ರತಿಭಟನೆ ಬೀಜಿಂಗ್‌, ಶಾಂಘೈ ಹಾಗೂ ಮತ್ತಷ್ಟು ನಗರಗಳಿಗೂ ವಿಸ್ತರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿದ ಬಿಎಸ್‌ಎಫ್