Select Your Language

Notifications

webdunia
webdunia
webdunia
webdunia

ಮುಕುಲ್ ರೋಹಟಾಗಿ ಸೀನಿಯರ್ ಅಡ್ವೋಕೇಟ್ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ

ಮುಕುಲ್ ರೋಹಟಾಗಿ ಸೀನಿಯರ್ ಅಡ್ವೋಕೇಟ್ ಬಳಿಕ  ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ
dehali , ಮಂಗಳವಾರ, 29 ನವೆಂಬರ್ 2022 (13:40 IST)
ಹಿರಿಯ ವಕೀಲ ಮುಕುಲ್ ರೋಹಟಾಗಿ ಭೇಟಿ ಬಳಿಕ ದೆಹಲಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಮುಕುಲ್ ರೋಹಟಾಗಿ ತುಂಬಾ ಸೀನಿಯರ್ ಅಡ್ವೋಕೇಟ್. ನಾವು ನೇಮಕ ಮಾಡಿಕೊಂಡ ಪ್ಯಾನೆಲ್ ನಲ್ಲಿ ಅವರು ಹಿರಿಯ ಅಡ್ವೋಕೇಟ್ ಆಗಿದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಸಂಬಂಧ ಪಟ್ಟ ಹಾಗೆ ಈಗಾಗಲೇ ಎಲ್ಲವನ್ನು ಸಹ ನಮ್ಮ ಅಡ್ವೋಕೇಟ್ ಜನರಲ್ ವಿವರಿಸಿದ್ದಾರೆ. ನಾನು ಗಡಿ ವಿವಾದದ ಕಾನೂನಾತ್ಮಕ ಹಿನ್ನೆಲೆ ಬಗ್ಗೆ ರೋಹಟಾಗಿ ಅವರಿಗೆ ವಿವರಣೆ ನೀಡಿದ್ದೇನೆ. ನಾಳೆ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡನೆ ಮಾಡಲು ಎಲ್ಲಾ ರೀತಿಯ ಸಿದ್ಧತೆ ನಡೆದಿದೆ. ಮಹಾರಾಷ್ಟ್ರ ಸರ್ಕಾರ ಹಾಕಿರುವ ಮೇಂಟೈನೆಬಲಿಟಿ ಕುರಿತಾಗಿ ವಿಚಾರಣೆ ನಡೆಯಲಿದೆ. ಹಿಂದಿನ ಸಿಜೆಐ ದೀಪಕ್ ಮಿಶ್ರ ಅವರು ಇದರ ಮೇಂಟೈನಬಲಿಟಿ ವಿಚಾರವನ್ನ ಸಿದ್ದಪಡಿಸಿದ್ರು. ಅದಕ್ಕೆ ನಮ್ಮ ಪ್ರತಿರೋಧ ಹೇಗಿರಬೇಕು ಎಂಬುದರ ಬಗ್ಗೆ ನಾವು ಸಿದ್ದರಾಗಿದ್ದೇವೆ. ನಮಗೆ ಭರವಸೆ ಇದೆ, ಕರ್ನಾಟಕದ ಪರವಾಗಿ  ಸಮರ್ಥವಾಗಿ ವಾದ ಮಾಡಲಿದ್ದೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟ್ವಿಟ್ಟರ್ ಅನ್ನು ತೆಗೆಯೋದಾಗಿ ಆಪಲ್ ಬೆದರಿಕೆ ಹಾಕಿದೆ : ಮಸ್ಕ್