Publish Date: Mon, 28 Nov 2022 (21:03 IST)
Updated Date: Mon, 28 Nov 2022 (21:05 IST)
ಹಾರ್ನ್ ಕಿರಿಕಿರಿ ಅಂತಾ ಕಾರು ಚಾಲಕನಿಗೆ ಚಾಕು ಇರಿದಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬೈರೇನಹಳ್ಳಿಯಲ್ಲಿ ನಡೆದಿದೆ. ಬೈರೇನಹಳ್ಳಿಯಲ್ಲಿ ನಿನ್ನೆ ಸಂಜೆ ಬೆಂಗಳೂರು ಮೂಲದ ಹೇಮಂತ್ ಎಂಬಾತ ಕಾರಿನಲ್ಲಿ ಹೋಗುವಾಗ ಹಾರ್ನ್ ಮಾಡಿ ಜಾಗ ಕೇಳಿದ್ದಕ್ಕೆ ಏಕಾಏಕಿ ಕಾರು ಅಡ್ಡಗಟ್ಟಿ ದ್ವಿಚಕ್ರ ವಾಹನದ ಯುವಕರು ಡ್ಯಾಗರ್ನಿಂದ ಹಲ್ಲೆ ಮಾಡಿದ್ದಾರೆ. ಸ್ಥಳೀಯರು ಹೇಮಂತ್ ನನ್ನ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ನಾಲ್ಕೈದು ಕಡೆ ಡ್ಯಾಗರ್ನಿಂದ ದುಷ್ಕರ್ಮಿಗಳು ಚುಚ್ಚಿದ್ದು, ಹೇಮಂತ್ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಈ ಪ್ರಕರಣ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.