Publish Date: Tue, 29 Nov 2022 (14:47 IST)
Updated Date: Tue, 29 Nov 2022 (14:51 IST)
ಚಂಡೀಗಢ : ಭಾರತದ ಗಡಿ ಭದ್ರತಾ ಪಡೆ ಭಯೋತ್ಪಾದನಾ ಚಟುವಟಿಕೆಗಳ ಮೇಲಿನ ತನ್ನ ದಮನವನ್ನು ಮುಂದುವರಿಸಿದೆ.
ಪಾಕಿಸ್ತಾನದಿಂದ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಡ್ರೋನ್ ಒಂದನ್ನು ಬಿಎಸ್ಎಫ್ ಅಧಿಕಾರಿಗಳು ಹೊಡೆದುರುಳಿಸಿದ್ದಾರೆ. ಕೇವಲ 2 ದಿನಗಳ ಹಿಂದೆಯೂ ಇಂತಹುದೇ ಘಟನೆ ನಡೆದಿತ್ತು.
ಚಹರ್ಪುರ್ ಗ್ರಾಮದ ಬಳಿ ಭಾರತದ ಭೂಪ್ರದೇಶಕ್ಕೆ ನುಸುಳುತ್ತಿದ್ದ ಡ್ರೋನ್ ಅನ್ನು ಗಮನಿಸಿದ ಸೈನಿಕರು ಅದರ ಮೇಲೆ ಗುಂಡು ಹಾರಿಸಿದ್ದಾರೆ. ಈ ಮೂಲಕ ಪಾಕಿಸ್ತಾನದ ಮತ್ತೊಂದು ಕಳ್ಳಸಾಗಣೆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಪಾಕಿಸ್ತಾನದಿಂದ ಭಾರತಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಡ್ರೋನ್ನ ಶಬ್ಧ ಕೇಳಿ ಬಿಎಸ್ಎಫ್ ಅಧಿಕಾರಿಗಳು ಗುಂಡು ಹಾರಿಸಿದ್ದಾರೆ. ಗುಂಡು ಶಂಕಿತ ಡ್ರೋನ್ಗೆ ಬಡಿದು, ಅದು ನೆಲಕ್ಕೆ ಉರುಳಿದೆ. ತಕ್ಷಣ ಪಡೆಗಳು ಸ್ಥಳವನ್ನು ಸುತ್ತುವರಿದಿದ್ದು, ಸಂಬಂಧಪಟ್ಟ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದಾರೆ.