Select Your Language

Notifications

webdunia
webdunia
webdunia
webdunia

KRS ಗ್ರಾಮದ ರಸ್ತೆಯಲ್ಲಿ ಕಾಣಿಸಿಕೊಂಡ ಚಿರತೆ

KRS ಗ್ರಾಮದ ರಸ್ತೆಯಲ್ಲಿ ಕಾಣಿಸಿಕೊಂಡ ಚಿರತೆ
ಚಿರತೆ ಮತ್ತೆ KRS ಗ್ರಾಮದ ರಸ್ತೆಯಲ್ಲಿ ಕಾಣಿಸಿಕೊಂಡಿದ್ದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ನಾಯಿಯನ್ನು ಹಿಡಿಯಲು ಚಿರತೆ ಗ್ರಾಮಕ್ಕೆ ಬಂದಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಚಿರತೆ ವಾಹನ ಸವಾರರೊಬ್ಬರಿಗೆ ರಸ್ತೆಯಲ್ಲಿ ಕಾಣಿಸಿಕೊಂಡಿದ್ದು, ನಾಯಿಯೊಂದನ್ನ‌ ಭೇಟಿಯಾಡಲು ಚಿರತೆ ಅಟ್ಟಿಸಿಕೊಂಡು ಬರುವಾಗ ವಾಹನದ ಹೆಡ್ ಲೈಟ್ ಸಹಾಯದಿಂದ ಚಿರತೆ ಓಡಾಟದ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಹಲವು ದಿನಗಳಿಂದ ನಿರ್ಬಂಧವಾಗಿರುವ KRS ನ ಬೃಂದಾವನದಲ್ಲಿ ಕಾಣಿಸಿಕೊಂಡ ಚಿರತೆಯಿಂದಾಗಿ ಆತಂಕ ಮನೆ ಮಾಡಿದೆ. ಇದೀಗ ಗ್ರಾಮಕ್ಕೆ ಬಂದು ನಾಯಿ ಬೇಟೆಯಾಡಿರೋದನ್ನ ಕಂಡು ಜನರಲ್ಲಿ ಭಯ ಮೂಡಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕಠಿಣ ಲಾಕ್‌ಡೌನ್ ಹೇರಿಕೆ ಸಮರ್ಥಿಸಿಕೊಂಡ ಚೀನಾ